‘ಸಿಡಿ ಲೇಡಿ’ ಹೊಸ ಟೈಟಲ್ ರಿಜಿಸ್ಟರ್..! ಸಂದೇಶ್ ನಾಗರಾಜ್ ಹೇಳಿದ್ದೇನು..?
ರಾಜ್ಯಾದ್ಯಂತ ಸದ್ಯ ಸಂಚಲನ ಸೃಷ್ಟಿಮಾಡಿರುವ ಸಿಡಿ ಪ್ರಕರಣ ಸಂಬಂಧ ಸಿನಿಮಾ ಕೂಡ ತಯಾರಾಗಲಿದೆಯಂತೆ. ಹೌದು ಈಗಾಗಲೇ ‘ಸಿಡಿ ಲೇಡಿ’ ಎಂಬ ಟೈಟಲ್ ಕೂಡ ರಿಜಿಸ್ಟರ್ ಆಗಿದೆ.
ನಿರ್ಮಾಪಕ ಸಂದೇಶ್ ನಾಗರಾಜ್ ಅವರು ‘ಸಿಡಿ ಲೇಡಿ’ ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಒಂದು ಸಿನಿಮಾ ಆಗಿ ಹೊರಹೊಮ್ಮಲಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಂದೇಶ್, ಸಿಡಿ ಲೇಡಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಕಥೆ ಚಿತ್ರಕಥೆ ಇನ್ನೂ ಸಿದ್ಧವಾಗಿಲ್ಲ. ಯಾವಾಗ ಸೆಟ್ಟೇರುತ್ತದೆ ಅನ್ನೋ ಬಗ್ಗೆಯೂ ನಿರ್ಧರಿಸಿಲ್ಲ. ಮುಂದೆ ಈ ಎಲ್ಲಾ ವಿಚಾರಗಳು ಫೈನಲ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಸಂದೇಶ್ ಫಿಲಂಸ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಸಿಡಿ ಲೇಡಿ ಶೀರ್ಷಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು. ಇದೀಗ ಟೈಟಲ್ ರಿಜೆಸ್ಟ್ರೇಶನ್ ಆಗಿದೆ.
ವಿಶ್ವದಲ್ಲಿ ಖುಷಿಯಾಗಿರುವ ವಿಚಾರದಲ್ಲಿ ಭಾರತವನ್ನ ಹಿಂದಿಟ್ಟ ಪಾಕಿಸ್ತಾನ, ಚೈನಾ..!
ಇನ್ಮುಂದೆ ತುಂಡು ಬಟ್ಟೆ ಧರಿಸಿದವರಿಗೆ ಶಾಮ್ಲಜಿ ವಿಷ್ಣು ದೇವಸ್ಥಾಕ್ಕೆ ಪ್ರವೇಶವಿಲ್ಲ..!
ಅಸ್ಸಾಂ ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಪ್ರಧಾನಿ ಯಾಕೆ ದುಃಖಿಸಲಿಲ್ಲ – ಪ್ರಿಯಾಂಕಾ ಗಾಂಧಿ ವಾದ್ರಾ








