ತನ್ನ ಕಂಪನಿಯ ಉದ್ಯೋಗಿಗಳಿಗೆ ಕಂಪ್ಯೂಟರ್ಗಳಲ್ಲಿ ಝೂಮ್ ಆ್ಯಪ್ ಬಳಸದಂತೆ ಗೂಗಲ್ ನಿರ್ಬಂಧಿಸಿದೆ ಎಂದು ಬಝ್ ಫೀಡ್ ವರದಿ ಮಾಡಿದೆ. ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿರುವ ಕಂಪನಿಯು ಝೂಮ್ ಆ್ಯಪ್ ನಲ್ಲಿರುವ ಭದ್ರತಾ ದೋಷಗಳನ್ನು ಉಲ್ಲೇಖಿಸಿ ಈ ವಾರದಿಂದ ಝೂಮ್ ಆ್ಯಪ್ ತನ್ನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು ತಿಳಿಸಿದೆ.
ಝೂಮ್ ಆ್ಯಪ್ ಗೆ ಬದಲಾಗಿ ಗೂಗಲ್ ತನ್ನದೇ ಆದ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಮೀಟ್ ಅನ್ನು ಹೊಂದಿದೆ.
ನಮ್ಮ ಕಾರ್ಪೊರೇಟ್ ನೆಟ್ವರ್ಕ್ನ ಹೊರಗಿನ ಕೆಲಸಕ್ಕಾಗಿ ಅನುಮೋದಿಸದ ಅಪ್ಲಿಕೇಶನ್ಗಳನ್ನು ಬಳಸಲು ನೌಕರರಿಗೆ ಅವಕಾಶ ನೀಡಬಾರದು ಎಂಬ ನೀತಿಯನ್ನು ನಾವು ಬಹಳ ಹಿಂದಿನಿಂದಲೂ ಹೊಂದಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ, ನಮ್ಮ ಭದ್ರತಾ ತಂಡವು ಝೂಮ್ ಆ್ಯಪ್ ಡೆಸ್ಕ್ ಟಾಪ್ ಕ್ಲೈಂಟ್ ಬಳಸುವ ಉದ್ಯೋಗಿಗಳಿಗೆ, ನಮ್ಮ ಉದ್ಯೋಗಿಗಳು ಬಳಸುವ ಅಪ್ಲಿಕೇಶನ್ಗಳಿಗೆ ಝೂಮ್ ಆ್ಯಪ್ ಭದ್ರತಾ ಮಾನದಂಡಗಳನ್ನು ಪೂರೈಸದ ಕಾರಣ ಅದು ಇನ್ನು ಮುಂದೆ ಕಾರ್ಪೊರೇಟ್ ಕಂಪ್ಯೂಟರ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ ಎಂದು ಗೂಗಲ್ ವಕ್ತಾರರು ಹೇಳಿಕೆ ನೀಡಿದ್ದಾರೆ .
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಝೂಮ್ ಆ್ಯಪ್ ಬಳಸುತ್ತಿರುವ ಉದ್ಯೋಗಿಗಳು ವೆಬ್ ಬ್ರೌಸರ್ ಮೂಲಕ ಅಥವಾ ಮೊಬೈಲ್ ಮೂಲಕ ಅದನ್ನು ಮುಂದುವರಿಸಬಹುದು ಎಂದು ಅವರು ತಿಳಿಸಿದ್ದಾರೆ
ಕೊರೋನಾ ಭೀತಿಯಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಪರಿಸ್ಥಿತಿ ಇರುವುದರಿಂದ ಝೂಮ್ ಆ್ಯಪ್ನ ಜನಪ್ರಿಯತೆಯೂ ಹೆಚ್ಚಾಗಿದೆ. ಆದರೆ ಹಲವು ಭದ್ರತಾ ವೈಫಲ್ಯಗಳು ಈ ಆ್ಯಪ್ ನಲ್ಲಿದ್ದು, ಝೂಮ್ ಬಾಂಬ್ ದಾಳಿ ಎಂದು ಕರೆಯಲ್ಪಡುವ ಹೊಸ ರೀತಿಯ ಹ್ಯಾಕರ್ ಗಳನ್ನು ಒಳಗೊಂಡಿದೆ.
ಝೂಮ್ ಬಳಕೆಯನ್ನು ಗೂಗಲ್ ಗಿಂತ ಮೊದಲೇ ಟೆಸ್ಲಾ ಕಂಪನಿ ನಿಷೇಧಿಸಿತ್ತು. ಟೆಸ್ಲಾ ಈ ತಿಂಗಳ ಆರಂಭದಲ್ಲಿ ಉದ್ಯೋಗಿಗಳಿಗೆ ಭದ್ರತೆಯ ಕಾರಣ ನೀಡಿ ಫೋನ್ ಕರೆಗಳು, ಇಮೇಲ್ ಮತ್ತು ಸಂದೇಶಗಳನ್ನು ಅವಲಂಬಿಸುವಂತೆ ಹೇಳಿತ್ತು.
ಜಿಬಿಎ ದಂಡದ ಬಿಸಿ- ಆ.22ರ ಡೆಡ್ಲೈನ್ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ...







