ಅಕ್ಕಿ ಇಡುತ್ತೇನೆ ಎಂದು ಬಂದವ ಯುವತಿಯನ್ನ ಬೆತ್ತಲೆ ಮಾಡಿ ಬ್ಲಾಕ್ ಮೇಲ್ ಮಾಡಿದ..!
ಆಟೋ ಚಾಲಕನೋರ್ವ ಗ್ರಾಹಕರ ಮನೆಗೆ ಅಕ್ಕಿ ಮೂಟೆ ಇಡಲು ಹೋಗಿ ಮನೆಯಲ್ಲಿದ್ದ ಯುವತಿಯ ಬಟ್ಟೆ ವಿವಸ್ತ್ರಗೊಳಿಸಿ ಬೆತ್ತಲೆ ಚಿತ್ರವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಆಕೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಇಂತಹದೊಂದು ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಾಯಿ ಸರ್ಕಾರಿ ನೌಕರರಾಗಿದ್ದಾರೆ. ಆಕೆಯ ತಾಯಿ ಕಚೇರಿಗೆ ಹೋದ ಬಳಿಕ ಮನೆಯಲ್ಲಿ ಯುವತಿ ಒಬ್ಬಳೇ ಇರುವುದನ್ನ ಗಮನಿಸಿದ್ದ ಆಟೋ ಚಾಲಕ ಅನಿಲ್ ರಾಜ್ ಅಕ್ಕಿ ಮನೆಯಲ್ಲಿ ಇಡುವ ನೆಪದಲ್ಲಿ ಮನೆಗೆ ಬಂದಿದ್ದಾನೆ. ನಂತರ ಯುವತಿಯ ಬಳಿ ನೀರು ಕೇಳಿದ್ದಾನೆ ನೀರು ತಂದು ಕೋಡೋದರೊಳಗೆ ಮನೆಯೊಳಗೆ ಬಾಗಿಲು ಹಾಕಿಕೊಂಡಿದ್ದ ಕಿರಾತಕ ಯುವತಿಗೆ ಬಟ್ಟೆ ಬಿಚ್ಚುವಂತೆ ಚಾಕು ಹಿಡಿದು ಬೆದರಿಕೆ ಹಾಕಿದ್ದಾನೆ.
ಬಳಿಕ ಯುವತಿಯ ಬೆತ್ತಲೆ ವಿಡಿಯೋ ಸೆರೆ ಹಿಡಿದು ಆಕೆಯ ತಾಯಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. 25 ಲಕ್ಷ ರೂಪಾಯಿಗಾಗಿ ಡಿಮ್ಯಾಂಡ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಮಗಳಿಗೆ ತನ್ನ ಜೊತೆ ಅನೈತಿಕ ಸಂಬಂಧ ಹೊಂದಲು ಕಳುಹಿಸಬೇಕೆಂಬ ಬೇಡಿಕೆಯಿಟ್ಟು ಬ್ಲಾಕ್ ಮೇಲೆ ಮಾಡಿದ್ದಾನೆ. ತನ್ನ ಬೇಡಿಕೆ ಈಡೇರದೇಹೋದರೆ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ. ಇದ್ರಿಂದ ಬೇಸತ್ತು ಹೋಗಿದ್ದ ಸಂತ್ರಸ್ತೆಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮನೆಯ ಕರೆಂಟ್ ಕಡಿತಗೊಳಿಸಿದ್ದರಿಂದ ರೋಸಿಹೋದ ವ್ಯಕ್ತಿ ಆತ್ಮಹತ್ಯೆ ಯತ್ನ
ಏಪ್ರಿಲ್ ನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ..!
BIGGBOSS 8 : ದೊಡ್ಮನೆಯಲ್ಲಿ ಬರೀ ಪ್ರಶಾಂತ್ ಸಂಬರಗಿಯದ್ದೇ ಮಾತು..!
ವಿಜಯ್ ಸಿನಿಮಾದಿಂದ ರಶ್ಮಿಕಾಗೆ ಗೇಟ್ ಪಾಸ್ – ಕನ್ನಡದ ಪೂಜಾ ಹೆಗ್ಡೆಗೆ ಚಾನ್ಸ್..!
ಕಾರ್ತಿಯ ‘ಸುಲ್ತಾನ’ದಲ್ಲಿ ಕೆಜಿಎಫ್ ಗರುಡನ ಅಬ್ಬರ..!
‘ರಾಬರ್ಟ್’ ಸಕ್ಸಸ್ ಸಂಭ್ರಮದಲ್ಲಿ ‘ಮದಗಗಜ’ ನಿರ್ದೇಶಕನಿಗೆ ಕಾರ್ ಗಿಫ್ಟ್ ಕೊಟ್ಟ ಉಮಾಪತಿ..!








