ರಾಷ್ಟ್ರೀಯ ಪರಿಹಾರ ನಿಧಿ ಅಂತಾ ಇದೆ. ಇದು ಪಿಎಂ ಕೇರ್ ಅನ್ನೋದಕ್ಕಿಂತ ಇಂಡಿಯಾ ಕೇರ್ ಆಗಬೇಕಿತ್ತು. ಈ ಪರಿಹಾರ ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ದೇಣಿಗೆ ಪಡೆಯಿರಿ ಅದನ್ನು ಪ್ರಶ್ನಿಸಲ್ಲ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆ ಮರೆಯಬಾರದು. ನಮಗೆ ನೀಡಬೇಕಾದ ನೆರವು ನೀಡಬೇಕು. ದೇಣಿಗೆ ಜತೆಗೆ ನಮ್ಮ ನಾಯಕರು ನೀಡಿರುವ ಸಲಹೆಯಂತೆ ಜಾಹೀರಾತು ಹಾಗೂ ಇತರೆ ಯೋಜನೆ ನಿಲ್ಲಿಸಿ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಿ. ನೀವು ಇದನ್ನು ಹೇಗೆ ಬಳಸಿಕೊಳ್ಳುತ್ತಿರೋ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಅದು ಸಮನಾಗಿ ಹಂಚಿಕೆಯಾಗಬೇಕು ಎಂದು ಕೇಂದ್ರ ಸರ್ಕಾರ ಡಿಕೆಶಿ ಒತ್ತಾಯ ಮಾಡಿದ್ದಾರೆ.
ಸಾರಿಗೆ ನಿಗಮಗಳಿಗೆ ಸರ್ಕಾರದಿಂದಲೇ ₹5,650 ಕೋಟಿ ಬಾಕಿ; ತನ್ನ ತಪ್ಪಿಗೆ ಜನರ ಮೇಲೆ ಪ್ರಯಾಣ ದರ ಏರಿಕೆ ಹೊರೆ: ಆರ್. ಅಶೋಕ್ ಆಕ್ರೋಶ
ಬೆಂಗಳೂರು, ರಾಜ್ಯದ ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಬರಬೇಕಿರುವ ಒಟ್ಟು ₹5,650.95 ಕೋಟಿ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಸ್ ಪ್ರಯಾಣ ದರ ಏರಿಕೆ ಮಾಡುವ...








