ರಾಷ್ಟ್ರೀಯ ಪರಿಹಾರ ನಿಧಿ ಅಂತಾ ಇದೆ. ಇದು ಪಿಎಂ ಕೇರ್ ಅನ್ನೋದಕ್ಕಿಂತ ಇಂಡಿಯಾ ಕೇರ್ ಆಗಬೇಕಿತ್ತು. ಈ ಪರಿಹಾರ ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ದೇಣಿಗೆ ಪಡೆಯಿರಿ ಅದನ್ನು ಪ್ರಶ್ನಿಸಲ್ಲ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆ ಮರೆಯಬಾರದು. ನಮಗೆ ನೀಡಬೇಕಾದ ನೆರವು ನೀಡಬೇಕು. ದೇಣಿಗೆ ಜತೆಗೆ ನಮ್ಮ ನಾಯಕರು ನೀಡಿರುವ ಸಲಹೆಯಂತೆ ಜಾಹೀರಾತು ಹಾಗೂ ಇತರೆ ಯೋಜನೆ ನಿಲ್ಲಿಸಿ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಿ. ನೀವು ಇದನ್ನು ಹೇಗೆ ಬಳಸಿಕೊಳ್ಳುತ್ತಿರೋ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಅದು ಸಮನಾಗಿ ಹಂಚಿಕೆಯಾಗಬೇಕು ಎಂದು ಕೇಂದ್ರ ಸರ್ಕಾರ ಡಿಕೆಶಿ ಒತ್ತಾಯ ಮಾಡಿದ್ದಾರೆ.
AIKYAM CUP 2026–27 – ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ
AIKYAM CUP 2026–27 - ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...








