ಕೆ.ಮಂಜು ಯಾರು ಅಂತಾನೆ ಗೊತ್ತಿಲ್ಲ : ಸುಧಾಕರ್ ಟಾಂಗ್
ಬೆಂಗಳೂರು : ನನಗೆ ಕೆ.ಮಂಜು ಯಾರು ಅಂತಾನೆ ಗೊತ್ತಿಲ್ಲ. ನಾನು ಯಾರ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಸಚಿವರನ್ನ ಬದಲಿಸಿ ಎಂಬ ಕೆ.ಮಂಜು ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ. ಮಂಜು ಅಂದ್ರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ.
ನಾನು ಯಾರ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ. ಟೀಕೆಗಳಿಗೆ ತಲೆಕೆಡಿಕೊಳ್ಳುವುದಿಲ್ಲ ಎಂದರು.
ಇನ್ನು ಮುಖ್ಯಮಂತ್ರಿಗಳು ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಅಂತಾನೂ ಹೇಳೋದಿಲ್ಲ. ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾವು ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ. ನಮಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನ ಟೀಕೆ ಮಾಡುತ್ತಿದ್ದರೂ ಬೇಜಾರಿಲ್ಲ.
ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆ. ಕೆಲವರಿಗೆ ರಿಯಾಯಿತಿ ಕೊಟ್ಟಿದ್ದಾರೆ.
ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮಾರ್ಗಸೂಚಿ ರಿಯಾಯಿತಿ ಬಗ್ಗೆ ಸುಧಾಕರ್ ಹೇಳಿದರು.










