ಸಮುದ್ರದಲ್ಲಿ ಈಜಲು ಹೋಗಿ ಬಾಲಕ ಸಾವು
ಕಾಸರಗೋಡು : ಸಮುದ್ರದಲ್ಲಿ ಸಹಪಾಠಿಗಳೊಂದಿಗೆ ಈಜಲು ಹೋಗಿದ್ದ ಬಾಲಕ ಮೃತಪಟ್ಟಿರುವ ಘಟನೆ ಕಾಞ0ಗಾಡ್ ಕಡಪ್ಪುರದಲ್ಲಿ ಶುಕ್ರವಾರ ನಡೆದಿದೆ.
ವಡಗರ ನಿವಾಸಿ 14 ವರ್ಷದ ಅಜ್ಮಲ್ ಮೃತ ಬಾಲಕನಾಗಿದ್ದಾನೆ.
ಬಾಲಕ ಆರು ಮಂದಿ ಸಹಪಾಠಿಗಳ ಜೊತೆ ಸ್ನಾನಕ್ಕಿದಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಜ್ಮಲ್ ನೀರುಪಾಲಾಗಿದ್ದನು.
ಸಮುದ್ರ ಪಾಲಾಗಿದ್ದ ಅಜ್ಮಲ್ ಗಾಗಿ ಗುರುವಾರ ಸಂಜೆಯಿಂದ ಶೋಧ ನಡೆಸಿದ್ದು, ಶುಕ್ರವಾರ ಮೃತದೇಹ ಪತ್ತೆಯಾಗಿದೆ.










