ಲಡಾಕ್ ನಲ್ಲಿ ‘ರೈಡರ್’ – ಶೂಟಿಂಗ್ ನ ಮಸ್ತ್ ಫೋಟೋಸ್ ಶೇರ್ ಮಾಡಿದ ನಿಖಿಲ್..!
ಸ್ಯಾಂಡಲ್ ವುಡ್ ನ ಯುವನಟ ನಿಖಿಲ್ ಕುಮಾರಸ್ವಾಮಿ ಸದ್ಯ ತಮ್ಮ ರೈಡರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ಗಾಗಿ ಅವರು ಲಡಾಕ್ ಗೆ ತೆರಳಿದ್ದಾರೆ. ಅಲ್ಲಿನ ಚಿಲ್ಲಿಂಗ್ ವೆದರ್ ನಲ್ಲಿ ತಮ್ಮ ಹ್ಯಾಂಡ್ಸಮ್ ಲುಕ್ ನಲ್ಲಿ ಹಿಮವಾತಾವರಣದ ವೈಟ್ ನೇಚರ್ ನ ನಡುವೆ ಬ್ಲಾಕ್ ಸ್ಯೂಟ್ ನಲ್ಲಿ ಸಖತ್ತಾಗಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೆರ್ ಮಾಡಿಕೊಂಡಿದ್ದಾರೆ.
ಉದ್ಯೋಗಗಳು ನಮ್ಮ ಪಾಕೆಟ್ಗಳನ್ನು ತುಂಬುತ್ತವೆ. ಆದರೆ ಸಾಹಸವು ನಮ್ಮ ಆತ್ಮವನ್ನು ತುಂಬುತ್ತದೆ. ಅದೃಷ್ಟವಂತರಿಗೆ ಅವರ ಉದ್ಯೋಗಗಳು ಸಾಕಷ್ಟು ಸಾಹಸಮಯವಾಗಿರುತ್ತದೆ ಎಂದು ಬರೆದುಕೊಂಡು ಲಡಾಖ್ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ರೈಡರ್ ಚಿತ್ರದ ಶೂಟಿಂಗ್ ನಿಮಿತ್ತ ನಿಖಿಲ್ ಚಿತ್ರ ತಂಡದ ಜೊತೆಗೆ ಲಡಾಖ್ನಲ್ಲಿ ಬೀಡುಬಿಟ್ಟಿದ್ದಾರೆ. ಶೂಟಿಂಗ್ ಬ್ರೇಕ್ ವೇಳೆ ಲಡಾಖ್ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ. ಲಡಾಖ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಫೋಟೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಟಾಲಿವುಡ್ ಡೈರೆಕ್ಟರ್ ವಿಜಯ್ ಕುಮಾರ್ ನಿರ್ದೇಶನದಲ್ಲಿ ರೈಡರ್ ಚಿತ್ರ ಮೂಡಿಬರುತ್ತಿದೆ. ಚಿತ್ರ ತಂಡ ಲಡಾಖ್ನಲ್ಲಿ ಸಿನಿಮಾ ಹಾಡನ್ನು ಶೂಟ್ ಮಾಡುತ್ತಿದೆ.
BIGGBOSS 8 – ‘ಅರವಿಂದ್ – ದಿವ್ಯಾ ಗ್ಯಾಂಡ್ ಫಿನಾಲೆಗೆ ಬರೋದು ಪಕ್ಕಾ’..!
BIGGBOSS 8 – ದೊಡ್ಮನೆಯಲ್ಲಿ ಲೇಡಿ ಸ್ಪರ್ಧಿಗಳ ನಡುವೆ ಜಡೆ ಜಂಗಿ ಕುಸ್ತಿ..!
BIGGBOSS 8 – ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮಾಡಲ್ಲ..!
ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ