ವಾಟ್ಸ್ ಆಪ್ ಬಳಕೆ ದಾರರೇ ಎಚ್ಚರ…. ಪಿಂಕ್ ವಾಟ್ಸಾಪ್ ಲಿಂಕ್ ನಿಂದ ದೂರವಿರಿ…!
ನವದೆಹಲಿ : ಅದ್ಯಾವಾಗ ವಾಟ್ಸಾಪ್ ಪ್ರೈವೆಸಿ ನೀತಿ ಜಾರಿಗೊಳಿಸುತ್ತಿರುವ ಬಗ್ಗೆ ಅನೌನ್ಸ್ ಮಾಡಿತ್ತೋ ಆಗಿನಿಂದಲೂ ವಾಟ್ಸಾಪ್ ಗೌಪ್ಯತೆ ಖಾಸಗಿ ಮಾಹಿತಿ ಸೋರಿಕೆ ಹೀಗೆ ನಾನಾ ವಿಚಾರಗಳಿಂದಾಗಿ ಜನರಿಗೆ ವಾಟ್ಸಾಪ್ ಮೇಲೆ ನಂಬಿಕೆಯೇ ಹೊರಟು ಹೋಗಿದೆ. ಅನೇಕರು ಈಗಾಗಲೇ ವಾಟ್ಸಾಪ್ ಗೆ ಗುಡ್ ಬೈ ಹೇಳಿದ್ದಾರೆ. ಹೀಗಿರುವಾಗ ಮತ್ತೆ ಮತ್ತೆ ವಾಟ್ಸಾಪ್ ಸೇಫ್ಟಿ ಬಗ್ಗೆ ಪ್ರಶ್ನೆ ಮಾಡುವ ಅನೇಕ ವಿಚಾರಗಳು ಬಯಲಾಗ್ತಿವೆ.
ಇತ್ತೀಚೆಗೆ ಜನರಿಗೆ ಪಿಂಕ್ ವಾಟ್ಸಾಪ್ ಲಿಂಕ್ ಪೆಂಬ ಪಾರ್ವಡ್ ಮೆಸೇಜ್ ಗಳು ಬರತೊಡಗಿವೆ. ಅಷ್ಟೇ ಅಲ್ಲ ಅನೇಕರು ಇದನ್ನ ಕ್ಲಿಕ್ ಮಾಡಿದ್ದಾರೆ. ಆದ್ರೆ ಈ ರೀತಿ ಲಿಂಕ್ ಗಳನ್ನ ಕ್ಲಿಕ್ ಮಾಡಿರೋ ಅನೇಕರಿಗೆ ಶಾಕ್ ಆಗಿದೆ.
ಪಿಂಕ್ ಬಣ್ಣದ ಸಿಂಬಲ್ ಜತೆಗೆ ಪಿಂಕ್ ವಾಟ್ಸ್ಆಯಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಹರಿದಾಡಿದೆ. ಅದನ್ನು ಒತ್ತಿದ ತಕ್ಷಣ ಲಿಂಕ್ ತನ್ನಿಂತಾನೇ ಅವರು ಸದಸ್ಯರಾಗಿರುವ ಗ್ರೂಪ್ಗಳಿಗೆ ಮತ್ತು ವೈಯಕ್ತಿವಾಗಿ ಫಾರ್ವರ್ಡ್ ಆಗಿದೆ. ಈ ಮೂಲಕ ಹೊಸ ವರ್ಶನ್ ಬಂದಿರಬೇಕೆಂದು ಒತ್ತಿದವರು ಪೇಚಿಗೆ ಸಿಲುಕಿದರು.
ಇದೊಂದು ವೈರಸ್ ಲಿಂಕ್ ಆಗಿದ್ದು, ಒಮ್ಮೆ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವರ್ಡ್ ಆಗುತ್ತದೆ. ಪಿಂಕ್ ವಾಟ್ಸ್ಆಯಪ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ಲಿಂಕನ್ನು ಸೃಷ್ಟಿಸಿ ಹರಿಯಬಿಟ್ಟಿದ್ದಾರೆ.








