ರಾಜ್ಯದಲ್ಲಿ 5-6 ಪಟ್ಟು ಕೋವಿಡ್ ಹೆಚ್ಚಾಗ್ತಿದೆ : ಸಿಎಂ
ಬೆಂಗಳೂರು : ರಾಜ್ಯದಲ್ಲಿ 5 ರಿಂದ 6 ಪಟ್ಟು ಕೋವಿಡ್ ಹೆಚ್ಚಾಗುತ್ತಿದೆ. ಇದರ ಜೊತೆ ಜೊತೆಗೆ ಮರಣ ಪ್ರಮಾಣ ಕೂಡ ಹೆಚ್ಚಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪನವರು ಇಂದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯವರ ಪ್ರಮುಖ ಜತೆ ಚರ್ಚೆ ಮಾಡಿದ್ದೇನೆ.
ರಾಜ್ಯದಲ್ಲಿ 5-6 ಪಟ್ಟು ಕೋವಿಡ್ ಹೆಚ್ಚಾಗ್ತಾ ಇದೆ. ಮರಣ ಪ್ರಮಾಣ ಕೂಡ ಹೆಚ್ಚಾಗುತ್ತಾ ಇದೆ. ಇಂಥ ಸಮಯದಲ್ಲಿ ಹೆಚ್ಚು ಸಹಕಾರ ಕೊಡಬೇಕೆಂದು ತಿಳಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಕೂಡ 522 ಬೆಡ್ ಬೇಕಾಗಿದೆ. 233 ಬೆಡ್ ಗಳನ್ನು ಈಗಾಗಲೇ ನೀಡಿದ್ದಾರೆ. ಹಂತ ಹಂತವಾಗಿ ಇನ್ನೂ 289 ಬೆಡ್ ಕೊಡ್ತೇವೆ ಅಂತ ಹೇಳಿದ್ದಾರೆ.
ಈ ರೀತಿ ಸಹಕಾರ ಕೊಟ್ರೆ ತುರ್ತಾಗಿ ಯಾರಿಗೆ ಐಸಿಯು ಬೆಡ್ ಅವಶ್ಯಕತೆ ಇದೆ, ಅವರಿಗೆ ಕೊಡೋಕೆ ಅನುಕೂಲವಾಗುತ್ತದೆ ಎಂದು ಹೇಳಿದರು.










