ಕೊರೊನಾದಿಂದ ತಂದೆಯನ್ನು ಕಳೆದುಕೊಂಡ ಕರ್ನಾಟಕದ ಬಾಲಕನ ನೆರವಿಗೆ ಬಂದ ಸಲ್ಮಾನ್ ಖಾನ್
ಮುಂಬೈ : ದೇಶದಲ್ಲಿ ಕೊರೊನಾ 2ನೇ ಅಲೆ ಅತ್ಯಂತ ಭಯಾನಕವಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಿದೆ.. ಆಕ್ಸಿಜನ್ ಕೊರತೆ ಬೆಡ್ ಕೊರತೆಯಿಂದ ಜನರು ಪ್ರಾಣ ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾಲಿವುಡ್ ಹಾಗೂ ಇತರೇ ಭಾಷೆಯ ಸಿನಿತಾರೆಯರು ಬಡವರ ಸಹಾಯಕ್ಕೆ ಧಾವಿಸುತ್ತಿದ್ಧಾರೆ.
ಅದ್ರಲ್ಲಿ ಬಾಲಿವುಡ್ ನ ಸುಲ್ತಾನ ಸಲ್ಮಾಣ್ ಖಾನ್ ಸಹ ಒಬ್ಬರು.. ಬಡವರಿಗೆ , ಕೋವಿಡ್ ವಾರಿಯರ್ಸ್ ಗೆ ಊಟ ನೀಡುವುದರ ಜೊತೆಗೆ ಹಲವರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿರುವ ಸಲ್ಲು ಭಾಯ್ ಈಗ ಕರ್ನಾಟಕ ಮೂಲದ 18 ವರ್ಷದ ಯುವಕನ ಬಾಲಿಗೆ ದೇವರಾಗಿ ನೆರವಿಗೆ ಮುಂದಾಗಿದ್ದಾರೆ.
ಹೌದು.. ಈ ಯುವಕ ತಂದೆ ಕೊರೊನಾದಿಂದ ಮೃತಪಟ್ಟಿದ್ದರು.. ಇದೀಗ ಈ ಬಾಲಕಿನಿಗೆಸಲ್ಮಾನ್ ಖಾನ್ ನೆರವಾಗಿದ್ದು, ಅವರ ಅಭಿಮಾನಿಗಳ ತಂಡ ಈ ರೀತಿ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿದೆ.
ಯುವಸೇನಾ ನಾಯಕ ಹಾಗೂ ನಟನಾಗಿರುವ ರಾಹುಲ್ ಎಸ್ ಕನಾಲ್ ಯುವಕನಿಗೆ ಪಡಿತರ , ಶೈಕ್ಷಣಿಕ ಉಪಕರಣಂಗಳನ್ನ ಒದಗಿಸಿದ್ಧಾರೆ. ಇನ್ನೂ ಈ ಕಷ್ಟ ಸಂದರ್ಭದಲ್ಲಿ ಅಗತ್ಯವಿರುವವರಿಗೆ ನೆರವಾಗುವಂತೆ ಸಲ್ಮಾನ್ ಖಾನ್ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಎಂದು ಕನಾಲ್ ಹೇಳಿಕೊಂಡಿದ್ದಾರೆ.
ಕಾಂಟ್ರವರ್ಸಿ ‘ಕ್ವೀನ್’ ಗೆ ಶಾಕ್ ಮೇಲೆ ಶಾಕ್ – ಕಂಗನಾರನ್ನ ಬ್ಯಾನ್ ಮಾಡಿದ ಖ್ಯಾತ ಡಿಸೈನರ್ಸ್..!








