BIGGBOSS 8 – ವಿನ್ನರ್ ಹೆಸರನ್ನು ರಿವೀಲ್ ಮಾಡಿದ ಕಿಚ್ಚ ಸುದೀಪ್
ಬಿಗ್ ಬಸ್ ಸೀಸನ್ 8 ಅರ್ಧಕ್ಕೆ ನಿಂತು ಹೋಗಿದ್ದು, ಕೊನೆಯ ಎಪಿಸೋಡ್ ವೇಳೆ ಕಿಚ್ಚ ಸುದೀಪ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ನೀವೆಲ್ಲರೂ ಈ ಸೀಸನ್ ವಿನ್ನರ್ ಆಗಿದ್ದೀರ ಎಂದಿದ್ದಾರೆ. ನಿಮಗೆ ನನ್ನ ವಿಶ್ ಯಾವಾಗಲೂ ಇರುತ್ತದೆ ಎಂದು ಸುದೀಪ್ ಕೆಲವು ಸಮಯ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಬೇಸರದಲ್ಲಿದ್ದ ಸ್ಪರ್ಧಿಗಳಿಗೆ ಕಿಚ್ಚ ಆವರ ಮಾತುಗಳು ಕೊಂಚ ಸಮಾಧಾನವನ್ನುಂಟು ಮಾಡಿದೆ.
ಬಿಗ್ಬಾಸ್ ಮನೆಯಿಂದ ಇನ್ನೇನು ಕೆಲವು ಗಂಟೆಯಲ್ಲಿ ಆಚೆ ಹೋಗುತ್ತವೆ ಎಂಬ ವಿಷಯವನ್ನು ತಿಳಿದ ಸ್ಪರ್ಧಿಗಳು ಕಣ್ಣೀರು ಹಾಕಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ತಮ್ಮ ಜರ್ನಿಯ ನೋವು, ನಲಿವಿನ ಕ್ಷಣಗಳಿರುವ ವೀಡಿಯೋವನ್ನು ನೋಡಿ ಭಾವುಕರಾಗಿದ್ದಾರೆ. ಕೊನೆಯಲ್ಲಿ ನಾವು ಸುದೀಪ್ ಸರ್ ಜೊತೆಗೆ ಮಾತನಾಡಬೇಕು ಎಂದು ಸ್ಪರ್ಧಿಗಳು ಕೇಳಿದ್ದಾರೆ. ಆಗ ಕಣ್ಮಣಿ ಕಿಚ್ಚಾ ಅವರ ಮಾತಿಲ್ಲದೆ ಈ ಕಾರ್ಯಕ್ರಮದ ಮುಗಿಯುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲಾರಿಗೂ ಈ ಕಿಚ್ಚನ ನಮಸ್ಕಾರಗಳು. ಕೆಲವು ವಾರಗಳ ದಿಂದ ನನಗೆ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ವಿಕೇಂಡ್ನಲ್ಲಿ ನಡೆಸಲು ಸಾಧ್ಯಗುತ್ತಿರಲಿಲ್ಲ. ಈ ಬಿಗ್ಬಾಸ್ ಜರ್ನಿ ನಿಮಗೆ ಒಳ್ಳೆಯದ್ದು ಮಾಡಲಿ. ಬಿಗ್ಬಾಸ್ ಅರ್ಧಕ್ಕೆ ಮುಗಿಯುತ್ತಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ. ನೀವೆಲ್ಲರೂ ಬಿಗ್ಬಾಸ್ ವಿನ್ನರ್ ಆಗಿದ್ದೀರಾ. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ಸುದೀಪ್ ಬೇಸರದಿಂದ ಸ್ಪರ್ಧಿಗಳಿಗೆ ವಿದಾಯ ಹೇಳಿದ್ದಾರೆ.








