ಕೇವಲ ಓರ್ವ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಿದ ವಿಮಾನ – VIDEO
ಮುಂಬೈ: ಲಾಕ್ ಡೌನ್ ಸಮಯದಲ್ಲಿ ಬಹುತೇಕ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ.. ಮತ್ತೊಂದೆಡೆ ಜನರು ವಿಮಾನಗಳ ಸೇವೆ ಇದ್ದರೂ ಸಂಚಾರ ಮಾಡದ ಪರಿಸ್ಥಿತಿ ಇದೆ.. ಈ ನಡುವೆ ಕೇವಲ ಒಬ್ಬನೇ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ವಿಮಾನ ಹಾರಾಟ ನಡೆಸಿರುವ ಸುದ್ದಿ ಈಗ ಭಾರೀ ಚರ್ಚೆಯಾಗ್ತಿದೆ. 360 ಜನ ಪ್ರಯಾಣಿಸಬಹುದಾದ ವಿಮಾನವೊಂದು ಕೇವಲ ಓರ್ವ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಾಟ ಮಾಡಿರುವುದಾಗಿ ತಿಳಿದುಬಂದಿದೆ.
ಕೊರೊನಾ ಎರಡನೇ ಅಲೆಯಿಂದಾಗಿ ಮುಂಬೈನಿಂದ ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೇವಲ ಓರ್ವ ಪ್ರಯಾಣಿಕರಿದ್ದರು. ಆದರೂ ಕೂಡ ಬೋಯಿಂಗ್ 777-300 ವಿಮಾನವು ತನ್ನ ಒಬ್ಬ ಪ್ರಯಾಣಿಕರಿಗಾಗಿ ಹಾರಾಟ ನಡೆಸಿದೆ. ಈ ಕುರಿತು ಸ್ವತಃ ವಿಮಾನದಲ್ಲಿ ಏಕೈಕ ಪ್ರಯಾಣಿಕನಾಗಿ ಹಾರಾಟ ನಡೆಸಿದ ಭವೇಶ್ ಜವೇರಿ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಸ್ಟಾರ್‍ಗೆಮ್ಸ್‍ನ ಸಿಇಒ ಆಗಿರುವ ಜವೇರಿ, ಮುಂಬೈನಿಂದ ದುಬೈಗೆ ಪ್ರಯಾಣ ಆರಂಭಿಸುತ್ತಿದ್ದಂತೆ, ವಿಮಾನದಲ್ಲಿ ನಾನೊಬ್ಬನೇ ಇದ್ದೆ ವಿಮಾನ ಪ್ರವೇಶಿಸುತ್ತಿದ್ದಂತೆ ವಿಮಾನದ ಸಿಬ್ಬಂದಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಖಾಲಿ ಸೀಟ್‍ಗಳ ಮಧ್ಯೆ ಕುಳಿತು ಹಾರಾಟ ನಡೆಸಿದೆ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮುಂಬೈಯಿಂದ ದುಬೈಗೆ ಹಲವು ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದೇನೆ.
ಆದರೆ ಈ ಪ್ರಯಾಣ ವಿಭಿನ್ನವಾಗಿತ್ತು. ಪ್ರತಿ ಬಾರಿ ಪ್ರಯಾಣಿಸುವಾಗ ವಿಮಾನ ಸಿಬ್ಬಂದಿ ಮೈಕ್ ಮೂಲಕ ಸೂಚನೆಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ನನ್ನ ಬಳಿ ಬಂದು ನಿವೋಬ್ಬರೇ ಪ್ರಯಾಣಿಕ, ಹಾಗಾಗಿ ಪೂರ್ತಿ ವಿಮಾನದ ಪರಿಚಯ ಮಾಡಬೇಕೆ ಎಂದು ಕೇಳಿದರು ಎಂದು ಹೇಳುವ ಮೂಲಕ ಸಂತೋಷ ಹಂಚಿಕೊಂಡರು.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.. ಈ ವೀಡಿಯೋವನ್ನು ರೂಪಿನ್ ಶರ್ಮಾ ಐಪಿಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಜವೇರಿ ಅವರು ಯುಎಇ ಸರ್ಕಾರದ ಗೋಲ್ಡನ್ ವೀಸಾ ಪಡೆದುಕೊಂಡಿದ್ದ ಕಾರಣ ಏಕೈಕ ಪ್ರಯಾಣಿಕನಿದ್ದರು ಕೂಡ ವಿಮಾನ ಹಾರಾಟ ನಡೆಸಿದೆ.
https://twitter.com/i/status/1397158308977340422
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








