ಹೊನ್ನಾಳಿ : ಪಾದರಾಯನಪುರ ಗಲಭೆ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡಿ ಭಾರೀ ಟೀಕೆಗಳಿಗೆ ಒಳಗಾದ ಶಾಸಕ ಜಮೀರ್ ಅಹ್ಮದ್ ವಿರುದ್ಧ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಗೂಂಢಾ ಕಾಯ್ದೆಯಡಿ ಜಮೀರ್ ಬಂಧಿಸಬೇಕು. ಜಮೀರ್ ಅಹ್ಮದ್ ಮತಾಂಧ, ದೇಶದ್ರೋಹಿ. ದೇಶದ್ರೋಹಿಗಳನ್ನು ಗುಂಡು ಹೊಡೆದು ಸಾಯಿಸಬೇಕು ಎಂಬುದಾಗಿ ಗುಡುಗಿದ್ದಾರೆ.
ಇನ್ನೂ ಮುಂದುವರೆದು, ಇನ್ಮುಂದೆ ಗುಂಡಿನ ಸದ್ದು ಮಾತ್ರ ಕೇಳಬೇಕು. ಜಮೀರ್ ಅಹ್ಮದ್ ಅರೆ ಹುಚ್ಚ. ಸರ್ಕಾರ ಏನ್ ಮಾವನ ಮನೇನಾ..? ಪಾಕಿಸ್ತಾನನಾ.? ಜಮೀರ್ ಪ್ರಚೋದನೆಯಿಂದಲೇ ಪಾದರಾಯನಪುರದಲ್ಲಿ ಗಲಾಟೆ ನಡೆದಿದೆ. ಜಮೀರ್ ಇದೇ ನಡವಳಿಕೆ ಮುಂದುವರೆಸಿದ್ರೇ.. ಬೇರೆ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.








