ಮಾನಹಾನಿ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾಗುವುದರಿಮದ ವಿನಾಯಿತಿ ಕೋರಿದ ಕಂಗನಾ
ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಾಟ್ ಲೈಟ್ ನಲ್ಲಿರುವ ಕಂಗನಾ ರಣಾವತ್ ಒಂದೋ ಟ್ರೋಲ್ ಪೇಜ್ ಗಳಲ್ಲಿ ಸದ್ದು ಮಾಡ್ತಿರುತ್ತಾರೆ.. ಎಲ್ಲಾ ಯಾವುದಾದ್ರೂ ಪೋಸ್ಟ್ ಗಳ ಮೂಲಕ ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿರುತ್ತಾರೆ.. ಯಾವುದಾದ್ರೂ ಸಿನಿಮಾ ತಾರೆಯ ಬಗ್ಗೆ , ಕೆಲವೊಮ್ಮೆ ರಾಜಕಾರಣದ ಇನ್ನೂ ಕೆಲವೊಮ್ಮೆ ತಮಗೆ ಸಂಬಂಧವೇ ಇಲ್ಲದ ವಿಚಾರವಾಗಿ ಎದ್ವಾ ತದ್ವಾ ಮಾತಾಡಿ ಸಂಕಷ್ಟಗಳಿಗೂ ಸಿಲುಕಿಕೊಳ್ತಾರೆ.. ಹೀಗೆ ಆಗಿ ಟ್ವಿಟ್ಟರ್ ನಿಂದ ಶಾಸ್ವತವಾಗಿ ಹೊರಬಿದ್ದಿದ್ದಾರೆ..
ಇನ್ನೂ ನಟಿ ಕಂಗನಾ ರನೌತ್ ಮೇಲೆ ಹಲವು ಪ್ರಕರಣಗಳು ಬಾಕಿ ಇವೆ. ದೇಶದ ಹಲವೆಡೆ ಕಂಗನಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಕೆಲವು ದೂರುಗಳನ್ನು ಸಿನಿಮಾ ಸೆಲೆಬ್ರಿಟಿಗಳೇ ನೀಡಿದ್ದಾರೆ. ಮಾನಹಾನಿ, ಸುಳ್ಳು ಮಾಹಿತಿ ಪ್ರಚಾರ ಸೇರಿದಂತೆ ಕೆಲವು ಗಂಭೀರ ಪ್ರಕರಣಗಳು ಕಂಗನಾ ವಿರುದ್ಧ ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಕಂಗನಾ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತೆ.
ಚಿತ್ರಕತೆ ರಚನೆಕಾರ, ಚಿತ್ರಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್, ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದು, ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಎಲ್ಲ ಮಾನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ನಟಿ ಕಂಗನಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
‘ದೇಶದ ವಿವಿದೆಡೆಗಳಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುತ್ತೇನೆ. ವಿಚಾರಣೆ ಸಮಯದಲ್ಲಿ ಅಲ್ಲಿಂದ ಮುಂಬೈಬೆ ಬರುವುದು ಕಷ್ಟಕರ ಕಾರ್ಯ. ಜೊತೆಗೆ ನನಗೆ ಹಾಗೂ ನನ್ನ ಸಿನಿಮಾ ನಿರ್ಮಾಣ ಸಂಸ್ಥೆಗೆ ಹೊರೆ. ಹಾಗಾಗಿ ನನಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೊಡಿ. ವಿಚಾರಣೆಗಳಿಗೆ ನನ್ನ ವಕೀಲರು ಹಾಜರಾಗುತ್ತಾರೆ’ ಎಂದಿದ್ದಾರೆ ಕಂಗನಾ.
ಇನ್ನೂ ‘ಯಾವುದೇ ಸಾಕ್ಷ್ಯಗಳ ಹೇಳಿಕೆಯನ್ನು ನನ್ನ ಅನುಪಸ್ಥಿತಿಯಲ್ಲಿ ರೆಕಾರ್ಡ್ ಮಾಡಿಕೊಳ್ಳಲು ನನ್ನ ಅಭ್ಯಂತರವಿಲ್ಲ’ ಎಂದು ಸಹ ಕಂಗನಾ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಕಂಗನಾ, ‘ಬಾಲಿವುಡ್‌ನಲ್ಲಿ ಆತ್ಮಹತ್ಯೆ ಮಾಡಿಸುವ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸುವ ಗ್ಯಾಂಗ್ ಒಂದು ಇದೆ ಎಂದು ಹೇಳಿ ಕೆಲವರ ಹೆಸರು ಹೇಳಿದ್ದರು. ಆ ಪಟ್ಟಿಯಲ್ಲಿ ಜಾವೇದ್ ಅಖ್ತರ್ ಹೆಸರನ್ನೂ ಸಹ ಸೇರಿಸಿದ್ದರು ನಟಿ ಕಂಗನಾ. ಹಾಗಾಗಿ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಕನ್ನಡ ಪ್ರದೇಶ ಗ್ರಾಮಗಳ ಐತಿಹಾಸಿಕ ಹೆಸರು ಬದಲಾವಣೆ ಸಲ್ಲದು: ಟಿಎಸ್ ನಾಗಾಭರಣ








