ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರಾಗಬಹುದು..?

admin by admin
June 28, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರಾಗಬಹುದು..?

indian test cricket c.k. naidu saakshatvಒಂದು ಮಹತ್ವದ ಸರಣಿ ಸೋತಾಗ ಭಾರತ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾವಣೆಯಾಗೋದು ಮಾಮೂಲಿ. ಇದರಲ್ಲಿ ಹೊಸತೇನೂ ಇಲ್ಲ.
1932ರಲ್ಲಿ ಸಿ.ಕೆ. ನಾಯ್ಡು ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಮೊದಲ ನಾಯಕನಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 33 ಮಂದಿ ಭಾರತ ಟೆಸ್ಟ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಹಂಗಾಮಿ ನಾಯಕರನಾಗಿ ತಂಡವನ್ನು ಮುನ್ನೆಡೆಸಿದ್ದವರು ಇದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವರ್ಷ ಭಾರತ ತಂಡವನ್ನು ಮುನ್ನೆಡೆಸಿದ್ದ ಕೀರ್ತಿ ಮಹಮ್ಮದ್ ಅಜರುದ್ದೀನ್ ಗೆ ಸಲ್ಲುತ್ತದೆ.
ಹಾಗಂತ ಭಾರತ ಕ್ರಿಕೆಟ್ ತಂಡದಲ್ಲಿ ತಂಡವನ್ನು ಮುನ್ನಡೆಸುವ ಸಾಮಥ್ರ್ಯವನ್ನು ಹೊಂದಿರುವಂತಹ ಆಟಗಾರರು ಇದ್ರು. ಇದರಲ್ಲಿ ಕೆಲವರು ಯಶ ಸಾಧಿಸಿದ್ರು. ಮತ್ತೆ ಕೆಲವರು ಆಟಗಾರನಾಗಿ ಸಫಲರಾದ್ರೆ, ನಾಯಕನಾಗಿ ವೈಫಲ್ಯ ಕೂಡ ಅನುಭವಿಸಿದ್ದರು.
2000 ವರ್ಷದ ನಂತರ ಟೀಮ್ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಮಂದಿ ಮುನ್ನಡೆಸಿದ್ದಾರೆ. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ , ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ. ರಹಾನೆ 2017ರಲ್ಲಿ ಆಸ್ಟ್ರೇಲಿಯಾ ಸರಣಿ, ಆಫಾಘಾನಿಸ್ತಾನ ಹಾಗೂ 2020ರಲ್ಲಿ ಆಸ್ಟ್ರೇಲಿಯಾ ಸರಣಿ.. ಹೀಗೆ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
india virat kohli saakshatvಇನ್ನು ವಿರಾಟ್ ಕೊಹ್ಲಿ 61 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 36 ಗೆಲುವು, 15 ಸೋಲು ಹಾಗೂ 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದರು. ಇದರಲ್ಲಿ 27 ಪಂದ್ಯಗಳನ್ನು ಗೆದ್ರೆ, 18 ಪಂದ್ಯಗಳಲ್ಲಿ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಹಾಗೇ ಅನಿಲ್ ಕುಂಬ್ಳೆ 2007 ಮತ್ತು 2008ರಲ್ಲಿ ಟೀಮ್ ಇಂಡಿಯಾದ ಸಾರಥಿಯಾಗಿದ್ದರು. 14 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ, ಐದು ಪಂದ್ಯಗಳಲ್ಲಿ ಸೋಲು ಮತ್ತು ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್, 2003ರಿಂದ 2007ರವರೆಗೆ ಒಟ್ಟು 25 ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದರು. ಇದರಲ್ಲಿ ಎಂಟು ಗೆಲುವು, 6 ಸೋಲು ಮತ್ತು 11 ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಸೌರವ್ ಗಂಗೂಲಿ.. ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದ ಹೆಗ್ಗಳಿಕೆಗೆ ದಾದಾ ಅವರದ್ದು. 49 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾದ ಸಾರಥಿಯಾಗಿದ್ದರು. 21 ಗೆಲುವು, 13 ಸೋಲು ಹಾಗೂ 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
sachin dravid saakshatvಇನ್ನು 1996ರಿಂದ 1999ರವರೆಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು ಸಚಿನ್ ತೆಂಡುಲ್ಕರ್. ತೆಂಡುಲ್ಕರ್ 25 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕನಾಗಿ 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. 9 ಪಂದ್ಯಗಳಲ್ಲಿ ಸೋತಿದ್ದಾರೆ. 12 ಪಂದ್ಯಗಳು ಡ್ರಾಗೊಂಡಿವೆ.
ಮೊಹಮ್ಮದ್ ಅಜರುದ್ದಿನ್ 1989ರಿಂದ 1998ರವರೆಗೆ ಭಾರತ ತಂಡದ ನಾಯಕನಾಗಿದ್ದರು. ಇದರ ನಡುವೆ ಕೆಲವೊಂದು ಸರಣಿಗಳಿಗೆ ಸಚಿನ್ ತೆಂಡುಲ್ಕರ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು . ಅಜರುದ್ದೀನ್ 47 ಟೆಸ್ಟ್ ಪಂದ್ಯಗಳಲ್ಲಿ 14ರಲ್ಲಿ ಗೆಲುವು, 14ರಲ್ಲಿ ಸೋಲು ಹಾಗೂ 19 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಅದೇನೇ ಇರಲಿ, ಟೀಮ್ ಇಂಡಿಯಾದಲ್ಲಿ ನಾಯಕನಾಗಿ ಒಬ್ಬ ಆಟಗಾರ ವಿಫಲನಾದ್ರೆ, ಮತ್ತೊಬ್ಬ ಆಟಗಾರ ತಂಡವನ್ನು ಮುನ್ನೆಡೆಸಲು ರೆಡಿಯಾಗಿರುತ್ತಿದ್ದ.
90ರ ದಶಕದ ನಂತರ ಗಮನಿಸುವುದಾದ್ರೆ, ಅಜರುದ್ದೀನ್ ಉತ್ತರಾಧಿಕಾರಿಯಾಗಿ ಸಚಿನ್ ತೆಂಡುಲ್ಕರ್, ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿಯಾಗಿ ಸೌರವ್ ಗಂಗೂಲಿ, ಗಂಗೂಲಿ ಉತ್ತರಾಧಿಕಾರಿಯಾಗಿ ದ್ರಾವಿಡ್, ದ್ರಾವಿಡ್ ಉತ್ತರಾಧಿಕಾರಿಯಾಗಿ ಧೋನಿ (ಅನಿಲ್ ಕುಂಬ್ಳೆ ಹಿರಿತನದ ಆಧಾರದ ಮೇಲೆ ನಾಯಕತ್ವವನ್ನು ಟೆಸ್ಟ್ ಪಂದ್ಯಕ್ಕೆ ನೀಡಲಾಗಿತ್ತು). ಧೋನಿ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ, ಹಾಗೇ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದರು.
dhoni kohli saakshatvಆದ್ರೆ ಈಗ ಪ್ರಶ್ನೆಯೊಂದು ಎದ್ದಿದೆ. ಕೊಹ್ಲಿ, ರಹಾನೆ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಎಲ್ಲರು ಕೂಡ ಒಂದೇ ವಯಸ್ಸಿನವರು. ವಯಸ್ಸಿನಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಇದೆಯಷ್ಟೇ..
ಆದ್ರೆ ಭವಿಷ್ಯದ ಟೀಮ್ ಇಂಡಿಯಾವನ್ನು ಮುನ್ನಡೆಸುವ ಆಟಗಾರ ಯಾರು ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಈಗೀನ ತಂಡದಲ್ಲಿರುವ ಆಟಗಾರರು ಹೆಚ್ಚು ಅಂದ್ರೆ ಮೂರು ನಾಲ್ಕು ವರ್ಷ ಆಡಬಹುದು. ಈ ಆಟಗಾರರನ್ನು ಬಿಟ್ಟು ತಂಡವನ್ನು ಯಾರು ಮುನ್ನೆಡೆಸುತ್ತಾರೆ. ಅಂತಹ ಆಟಗಾರರನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿ ರೆಡಿ ಮಾಡಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
mayank agarwal prithvi shaw shubman gill saakshatv team indiaಯಾಕಂದ್ರೆ ಸದ್ಯದ ಟೀಮ್ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಶುಬ್ಮನ್ ಗಿಲ್, ಪೃಥ್ವಿಶಾ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆದ್ರೆ ತಂಡದಲ್ಲಿ ಸ್ಥಾನವನ್ನು ಇನ್ನೂ ಕೂಡ ಭದ್ರಪಡಿಸಿಕೊಂಡಿಲ್ಲ.
ಪೃಥ್ವಿಶಾ 19 ವಯೋಮಿತಿ ವಿಶ್ವ ಕಪ್ ಗೆದ್ದ ನಾಯಕ. ಆದ್ರೆ ತಂಡದಲ್ಲಿ ಭದ್ರವಾಗಿ ಉಳಿದುಕೊಂಡಿಲ್ಲ. ಶ್ರೇಯಸ್ ಅಯ್ಯರ್ ಭಾರತ ಎ ತಂಡವನ್ನು ಮುನ್ನಡೆಸಿದ್ದರು. ಅವರು ಕೂಡ ಏಕದಿನ ಕ್ರಿಕೆಟ್ ಗೆ ಸೀಮಿತವಾಗಿದ್ದಾರೆ. ರಿಷಬ್ ಪಂತ್ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಈ ಬಾರಿ ಮುನ್ನಡೆಸಿದ್ದರು. ಆದ್ರೆ ಜವಾಬ್ದಾರಿ ಅರಿತು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಶುಬ್ಮನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.
ಹೀಗಾಗಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಈಗಲೇ ಉತ್ತರ ನೀಡಲು ಸಾಧ್ಯವಿಲ್ಲ.

Related posts

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

October 5, 2026
ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

October 5, 2026
Tags: #Prithvi Shaw#rishab pantAjinkya Rahaneanil kumbleybcciM.S Dhonimohammad azaruddinRahul DravidSachin TendulkarShreyas Iyer.Sourav GangulySportsteam indiavirat kohli
ShareTweetSendShare
Join us on:

Related Posts

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

by Shwetha
October 5, 2026
0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೆಂಗಳೂರು ಜಾತ್ರೆ ಈಗ ದೊಡ್ಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು...

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

by Shwetha
October 5, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ಪಾಲಿಗೆ ಈ ಬಾರಿಯ ಹಬ್ಬದ ಸೀಸನ್ ಮತ್ತಷ್ಟು ಸಡಗರ ತರುವ ಸಾಧ್ಯತೆ ಇದೆ. ಪ್ರಸ್ತುತ ಹಬ್ಬದ ಮುಂಗಡವಾಗಿ ನೀಡಲಾಗುತ್ತಿರುವ 25,000 ರೂಪಾಯಿಗಳನ್ನು...

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

by Shwetha
October 5, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ಭಾಷಣದ ಶೈಲಿ ಮತ್ತು ನೇರ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಇದೀಗ ಒಂದು ಅತ್ಯಂತ ಭಾವನಾತ್ಮಕ ಹೇಳಿಕೆ ನೀಡುವ ಮೂಲಕ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಂತೆ ಟಿವಿ ಮುಂದೆ ಕೂತು ಭಜನೆ ಮಾಡಲ್ಲ SIR ಅಕ್ರಮಕ್ಕೆ ಬಿಡುತ್ತೇವೆ SIT ಬಿಸಿ: ಪ್ರಿಯಾಂಕ್ ಖರ್ಗೆ

by Shwetha
October 5, 2026
0

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಬೃಹತ್ ಅಕ್ರಮ ನಡೆಯುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ....

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

by Shwetha
October 5, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಎಂದರೆ ಸದಾ ವಿವಾದಗಳ ಕೇಂದ್ರಬಿಂದು. ತಮ್ಮ ಹರಿತವಾದ ಮಾತುಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸತತವಾಗಿ ಟೀಕಿಸುವ ಪ್ರಕಾಶ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram