ಡಿ ಬಾಸ್ ವಿರುದ್ಧ ಆರೋಪ : ಇಂದ್ರಜಿತ್ ಮನೆಗೆ ಭದ್ರತೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಪ್ಲೈಯರ್ ಮೇಲೆ ಹಲ್ಲೆ ಆರೋಪ ಹೊರಿಸಿ ಗೃಹ ಸಚಿವ ಬೊಮ್ಮಾಯಿಗೆ ದೂರು ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿವಾಸಕ್ಕೆ ಪೊಲೀಸರು ಭದ್ರತೆ ಒದಹಿಸಿದ್ದಾರೆ. ನಟ ದರ್ಶನ್ ನಿರ್ಮಾಪಕ, ಆಪ್ತ ಸಂದೇಶ್ ನಾಗರಾಜ್ ಅವರ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದ್ದಾರೆ. ಇದು ‘ದಾಸ’ನ ಅಭಿಮಾನನಿಗಳನ್ನ ಕೆರಳಿಸಿದೆ
ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದ್ರಜಿತ್ ಅವರ ಕೋರಮಂಗಲದ ನಿವಾಸದ ಸುತ್ತಮುತ್ತ ಪೊಲೀಸ್ ಭದ್ರತೆ ನೀಡಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಇಂದ್ರಜಿತ್ ಲಂಕೇಶ್, ದರ್ಶನ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಮುಖ್ಯವಾಗಿ ದರ್ಶನ್ ಮತ್ತು ಟೀಂ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ವೇಳೆ ದರ್ಶನ್ ಆಪ್ತೆ ಪವಿತ್ರಾ ಗೌಡ ಮತ್ತು ಇನ್ನಿಬ್ಬರು ಯುವತಿಯರು ಕೂಡ ಇದ್ದರು ಎಂದು ಹೇಳಿದ್ದಾರೆ. ಬಳಿಕ ರಾಜಿ ಸಂದಾನ ಮಾಡಿ ಕಳುಹಿಸಿದ್ದಾರೆ ಎಂದು ಇಂದ್ರಜಿತ್ ಹೇಳಿದ್ದಾರೆ.
‘ದರ್ಶನ್ ಬಹಳ ಮುಗ್ಧ, ಯಾವುದೇ ಕೆಟ್ಟ ಕೆಲಸ ಮಾಡಲ್ಲ’ : ಬಿ.ಸಿ ಪಾಟೀಲ್
ಅಲ್ಲದೇ ಮೈಸೂರು ಪೊಲೀಸರ ವಿರುದ್ಧವೂ ಇಂದ್ರಜಿತ್ ಆರೋಪ ಮಾಡಿದ್ದಾರೆ. ಪೊಲೀಸ್ ಸ್ಟೇಷನ್ ಸೆಟಲ್ ಮೆಂಟ್ ಅಡ್ಡಾಗಳಾಗಿವೆ, ಪೊಲೀಸರು ಕೈಗೆ ಬಳೆ ತೊಟ್ಟು ಕೂಳಿತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಒಟ್ಟಾರೆ ಕಳೆದ ಒಂದು ವಾರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಮ್ಮೆ 25 ಕೋಟಿ ವಂಚನೆ ಪ್ರಕರಣದಲ್ಲಿ ಸುದ್ದಿಯಾದ್ರೆ , ಮತ್ತೊಮ್ಮೆ ಸಂದೇಶ್ ರೆಸ್ಟೋರೆಂಟ್ ನ ಸಪ್ಲೈಯರ್ ಗೆ ಹೊಡೆದ ಆರೋಪದ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ..








