ಭಾರೀ ಮಳೆಯಿಂದ ಉಂಟಾಗಿದ್ದ ಹೊಂಡಕ್ಕೆ ಬಿದ್ದ ಕಾರು – ಫೋಟೋ ವೈರಲ್
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿದಿದ್ದು, ಸಾಕಷ್ಟು ಅವಾಂತರಗಳನ್ನ ಸೃಷ್ಟಿ ಮಾಡಿದೆ.. ಈ ನಡುವೆ ನಡು ರಸ್ತೆಯಲ್ಲಿ ರಸ್ತೆಯಲ್ಲಿ ಏಕಾಏಕಿ ಉಂಟಾದ ಹೊಂಡಕ್ಕೆ ಕಾರೊಂದು ಹೂತು ಹೋಗಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ..
ಅಲ್ಲಿದ್ದ ಸ್ಥಳೀಯರು ಇದರ ಫೊಟೋಗಳನ್ನ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ., ದೆಹಲಿಯ ದ್ವಾರಕ ನಗರದಲ್ಲಿ ಕಾರನ್ನ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ರಸ್ತೆಯಲ್ಲಿ ಏಕಾಏಕಿ ದೊಡ್ಡ ಹೊಂಡ ಸೃಷ್ಟಿಯಾಗಿ ಕಾರು ಹೊಂಡದೊಳಗಡೆ ಹೂತು ಹೋಗಿದೆ. ಬಳಿಕ ಕಾರನ್ನು ಕ್ರೆನ್ ಮೂಲಕ ಮೇಲಕ್ಕೆತ್ತಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.
ಧಾರಾಕಾರ ನಮಳೆಯಿಂದಾಗಿ ರಿಂಗ್ ರಸ್ತೆ, ಪ್ರಗತಿ ಮೈದಾನ, ಪಾಲಂ, ಲಜಪತ್ ನಗರ, ಆರ್.ಕೆ ಪುರಂ, ಸಾಕೇತ್, ತಿಲಕ್ ನಗರ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿದೆ. ರಸ್ತೆಗಳೆಲ್ಲಾ ಕೆರೆಯಂತಾಗಿವೆ.. ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.








