Yeddyurappa ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ಸ್ವಾಗತಾರ್ಹ : ಈಶ್ವರಪ್ಪ
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಪರ ಮಠಾಧೀಶರು ಬ್ಯಾಟ್ ಬೀಸುತ್ತಿದ್ದಾರೆ.
ಈ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ಸ್ವಾಗತಾರ್ಹ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ಸ್ವಾಗತಾರ್ಹ.
ಆದರೆ ಯಡಿಯೂರಪ್ಪ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧ, ಅವರು ಹೇಳಿದಂತೆ ಕೆಲಸ ಮಾಡುತ್ತೆನೆ ಎಂದಿದ್ದಾರೆ.
ಹಾಗಾಗಿ ಅವರ ಮಾತನ್ನು ನಾವು ಕೇಳಬೇಕು. ಅವರಿಗೆ ಮುಜುಗರವಾಗುವಂತೆ ನಡೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.
ಇನ್ನು ನಿನ್ನೆ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಇಂದು ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬಿ ಎಸ್ ವೈಗೆ ನಮ್ಮ ಬೆಂಬಲವಿದೆ. ಆದರೆ ಆಯಾ ಪಕ್ಷಕ್ಕೆ ಅವರದ್ದೇ ಆದ ಸಿದ್ಧಾಂತಗಳಿವೆ. ಕಾದು ನೋಡಬೇಕು ಎಂದರು.









