ಪೊಲೀಸರಿಂದ ಪೊಲೀಸರ ಮೇಲೆಯೇ ಹದ್ದಿನ ಕಣ್ಣು
ಬೆಂಗಳೂರು : ಪದೇ ಪದೇ ಪೊಲೀಸರ ಮೇಲೇಯೇ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆ , ಹಿರಿಯ ಅಧಿಕಾರಿಗಳು ಮಾನಿಟರಿಂಗ್ ಕಾರ್ಯ ಶುರು ಮಾಡಿಕೊಂಡಿದ್ದಾರೆ. ಆಸ್ತಿ ಸಮಸ್ಯೆಗಳು , ಹಣ ವಸೂಲಿಗೆ ,ಬಡ್ಡಿ ಕೇಸ್ ಗಳಿಗೆ ದೂರು ದಾಖಲಿಸುತ್ತಿರುವ ಕೇಸ್ ಗಳ ಪತ್ತೆ ಹಾಗೂ ಬೆದರಿಕೆಗಾಗಿ ಪೊಲೀಸರನ್ನ ಬಳಸಿಕೊಳ್ಳುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಲುವಾಗಿ ಹಿರಿಯ ಅಧಿಕಾರಿಗಳು ಪೊಲೀಸರ ಮೇಲೆಯೇ ಹದ್ದಿನ ಕಣ್ಣಿಟ್ಟಿದ್ದಾರೆ..
ಪೊಲೀಸರ ಮೇಲೆ ಕೆಲವರು ಬ್ಲಾಕ್ ಮೇಲ್ ಮಾಡ್ತಾಯಿದ್ದಾರೆ.. ದೂರು ಬಂದ ಕೂಡಲೆ ದೂರುದಾರನ ಮಾಹಿತ ಆಧರಿಸಿ ಎಫ್ ಐ ಆರ್ ಅಥವಾ ಎನ್ ಸಿ ಆರ್ ದಾಖಲಿಸಬೇಕು. ಈ ಪ್ರೊಸಿಜರ್ ತಡವಾಗ್ತಿರೋದನ್ನೇ ಕೆಲ ಕಿಡಿಗೇಡಿಗಳು ಬಂಡವಾಳವಾಗಿಸಿಕೊಳ್ತಿದ್ದಾರೆ. ಇದರಲ್ಲಿ ಠಾಣಾ ಸಿಬ್ಬಂಧಿಗಳೂ ಕೂಡ ಭಾಗಿಯಾಗಿರುವ ಶಂಕೆ ಹಿನ್ನೆಲೆ ಪೊಲೀಸ್ ಟಾಣೆಯ ಮೇಲೆ ಹಿರಿಯ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ..
ಈ ಹಿನ್ನಲೆಯಲ್ಲಿ ಪ್ರತಿ ಎಫ್ ಐ ಆರ್ ಎನ್ ಸಿ ಆರ್ ಗಳನ್ನ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ಎಫ್ ಐ ಆರ್ ನಲ್ಲಿ ಹೆಸರಿದ್ದರೂ ಅರೆಸ್ಟ್ ಮಾಡದಕ್ಕೆ ಪ್ರಶ್ನೆ ಮಾಡಿದ್ದಾರೆ.. ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ.. ಅಲ್ಲದೇ ಹೆಚ್ಚುವರಿ ಪೊಲೀಸ್ ಆಯುಕ್ತರು ಈಗಾಗಲೇ ಅಶೋಕ್ ನಗರ ಪೊಲೀಸರ ವಿರುದ್ಧ ವಿಚಾರಣೆ ನಡೆಸಿದ್ದಾರೆ.








