ನಭೋಮಂಡಲದಲ್ಲಿ ಕೌತುಕ – ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ
ಇಂದು ನಭೋಮಂಡಲದಲ್ಲಿ ನಡೆಯಲಿರುವ ಕೌತುಕವನ್ನು ಕಣ್ಮುಂಬಿಕೊಳ್ಳಲು ಜನರು ಖಗೋಳವಿಜ್ಞಾನಿಗಳು ಕಾತುರರಾಗಿದ್ದಾರೆ. ಆದ್ರೆ ಬೇಸರದ ಸಂಗತಿಯAದ್ರೆ ಈ ಅಚ್ಚರಿ ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ ಹಗಲು ಆಗಿದ್ದರಿಂದ ಇದರ ಗೋಚರ ಆಗಲ್ಲ.
ಆಗಸ್ಟ್ 2ರ ಬೆಳಗ್ಗೆ 11.30ಕ್ಕೆ ಭೂಮಿ ಮತ್ತು ಶನಿ ಅತಿ ಸಮೀಪಕ್ಕೆ ಬರಲಿವೆ. ಈ ವಿದ್ಯಮಾನದಿಂದ ಪ್ರಕೃತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಂಭವಿಸಿಲ್ಲ. ಇದೊಂದು ಸೌರಮಂಡಲದ ಪ್ರಕ್ರಿಯೆ ಆಗಿರುತ್ತದೆ. ರಾತ್ರಿ ಆಗಿರುವ ದೇಶದ ಜನರು ಬರೀಗಣ್ಣಿನಿಂದ ನೋಡಬಹುದು ಎಂದು ಓಡಿಶಾ ತಾರಾಲಾಯದ ಉಪ ನರ್ದೇಶಕ ಪಠಾಣಿ ಸಾಮಂತ್ ಹೇಳಿದ್ದಾರೆ.
ಆಕಾಶ ಮೋಡಗಳಿಂದ ಕೂಡಿದ್ದರೆ ಶನಿ ಗ್ರಹದ ಗೋಚರ ಆಗಲ್ಲ. ಈ ವಿದ್ಯಮಾನದ ಬಳಿಕ ಗುರು ಪ್ರಕಾಶಮಾನವಾಗಿ ಕಾಣಲಾರಂಭಿಸುತ್ತದೆ. ಶನಿಯ ಸ್ಥಾನವೂ ಗುರುವಿನ ಪಶ್ವಿಮಕ್ಕೆ ಇರಲಿದೆ ಎಂದು ಪಠಾಣಿ ಸಾಮಂತ್ ಹೇಳಿದ್ದಾರೆ.
ಕೆನ್ನೆಗೆ ಹೊಡೆದರೆ ನೆಲಕಚ್ಚುವಂತೆ ತಿರುಗಿಸಿ ಬಾರಿಸುತ್ತೇವೆ : ಬಿಜೆಪಿಗೆ ಮಾತಿನ ಏಟು ಕೊಟ್ಟ ಉದ್ಧವ್
ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಯಾವ ದಾಖಲೆಗಳನ್ನು ಅಗತ್ಯ ಕೆಲಸಗಳಿಗೆ ಬಳಸಬಹುದು








