ಶಾಕಿಂಗ್ : “ಪಾಕ್ ಗೆ ತೆರಳುತ್ತಿರುವ ಕಾಶ್ಮೀರಿ ಯುವಕರು ಉಗ್ರರಾಗಿ ಮರಳುತ್ತಿದ್ದಾರೆ”..!
ಪಾಪಿ ಪಾಕಿಸ್ತಾನ ಕಾಶ್ಮೀರಿ ಯುವಕರನ್ನ ತಮ್ಮದೇ ದೇಶದ ವಿರುದ್ಧಚ ಎತ್ತಿ ಕಟ್ಟುತ್ತಾ ಕಲ್ಲು ತೂರಾಟದಂತಹ ಗಲಭೆಗಳನ್ನ ನಡೆಸಿದ್ದು, ಅಲ್ಲಿನ ಯುವಕರನ್ನ ಉಗ್ರ ಚಟಟುವಟಿಕೆಗಳಲ್ಲಿ ಬಾಗಿಯಾಗಲು ಪ್ರೇರಿಪಿಸುತ್ತಾ ಬಂದಿದೆ ಎನ್ನುವ ವಿಚಾರ ಹೊಸದೇನಲ್ಲ.. ಆದ್ರೆ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರಕ್ಕಿದ್ದ ಆಟರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸಸ್ತಾನದ ಬಾಲ ಕಟ್ ಆಗಿತ್ತು.. ದಿಕ್ಕು ತೋಚದಂತಾಗಿರುವ ಪಾಕ್ ಪ್ರದಾನಿ ಇಮ್ರಾನ್ ಆಗಾಗ ಅಲ್ಲಲ್ಲಿ ಮೈ ಮರೆಚಿಕೊಂಡು ಭಾರತದ ವಿರುದ್ಧ ಚೀರಾಡ್ತಾ ಇರುತ್ತಾರೆ..
ಆದ್ರೀಗ ಶಾಕಿಂಗ್ ವಿಚಾರವೊಂದು ಬಹಿರಂಗವಾಗಿದೆ.. ಹೌದು.. ಕಾಶ್ಮೀರದ ಯುವಕರು ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದನೆ ತರಬೇತಿ ಪಡೆದು ಭಾರತಕ್ಕೆ ವಾಪಸಾಗುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇತ್ತೀಚೆಗೆ ಭದ್ರತಾಪಡೆಗಳು ಹತ್ಯೆ ಮಾಡಿದ್ದ ಉಗ್ರ ಶಾಕಿರ್ ಅಲ್ತಾಫ್‌ಭಟ್ ಅಧಿಕೃತ ಪಾಸ್‌ಪರ‍್ಟ್‌ನೊಂದಿಗೆ 2018ರಲ್ಲಿ ಅಧ್ಯಯನಕ್ಕೆಂದು ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ಭಯೋತ್ಪಾದಕನಾಗಿ ದೇಶಕ್ಕೆ ಮರಳಿದ್ದ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.2015ರಿಂದ 2019ರ ಅವಧಿಯಲ್ಲಿ ಪಾಸ್ಪರ‍್ಟ್ಪಡೆದವರ ಪೈಕಿ ಸುಮಾರು 40 ಯುವಕರು ಅಧ್ಯಯನಕ್ಕೆಂದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ತೆರಳಿದ್ದರು. ಈ ಪೈಕಿ 28 ಮಂದಿ ತರಬೇತಿ ಪಡೆದ ಭಯೋತ್ಪಾದಕರಾಗಿ ಭಾರತಕ್ಕೆ ನುಸುಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆನ್ನೆಗೆ ಹೊಡೆದರೆ ನೆಲಕಚ್ಚುವಂತೆ ತಿರುಗಿಸಿ ಬಾರಿಸುತ್ತೇವೆ : ಬಿಜೆಪಿಗೆ ಮಾತಿನ ಏಟು ಕೊಟ್ಟ ಉದ್ಧವ್
ಕಳೆದ ಮೂರು ರ‍್ಷಗಳಲ್ಲಿ 100ಕ್ಕೂ ಹೆಚ್ಚು ಕಾಶ್ಮೀರಿ ಯುಕವರು ಅಧಿಕೃತ ವೀಸಾದೊಂದಿಗೆ ಕಿರು ಅವಧಿಗೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇವರ್‍ಯಾರೂ ಮರಳಿ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ. ಇವರೆಲ್ಲ ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‌ಗಳಾಗಿರಬಹುದು ಎಂದು ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಜುಲೈ 24ರಂದು ಬಂಡಿಪೊರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಲ್ತಾಫ್‌ಭಟ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಪೈಕಿ, ಭಟ್ ಸ್ಥಳೀಯ ನಿವಾಸಿಯೇ ಆಗಿದ್ದ. ಕಳೆದ ರ‍್ಷ ಏಪ್ರಿಲ್ 1ರಿಂದ 6ರ ಅವಧಿಯಲ್ಲಿ ಶೋಪಿಯಾನ್, ಕುಲ್ಗಾಂ, ಅನಂತ್‌ನಾಗ್ ಜಿಲ್ಲೆಗಳ ಕೆಲವು ಯುವಕರು ಭಯೋತ್ಪಾದಕರ ಜತೆ ದೇಶದ ಗಡಿಯೊಳಕ್ಕೆ ನುಸುಳಿದ್ದರು. ಇವರೆಲ್ಲ ಅಧಿಕೃತ ದಾಖಲೆಗಳೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದವರು ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸರ‍್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನರ‍್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನರ‍್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








