ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ : ಹರತಾಳು ಹಾಲಪ್ಪ
ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಈ ಮಧ್ಯೆ ಸಚಿವ ಸ್ಥಾನ ಆಕಾಂಕ್ಷಿಗಳು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಲಾಬಿ ಆರಂಭಿಸಿದ್ದಾರೆ. ಅದರಂತೆ ಶಾಸಕ ಹರತಾಳು ಹಾಲಪ್ಪ ಕೂಡ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಜಿಲ್ಲೆಯಿಂದ ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಕೇಳಿದ್ದೇನೆ. ಆದ್ರೆ ನಾನು ಮಂತ್ರಿಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಮಾಡೋದು ಇಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.
ಸಚಿವರನ್ನು ಪಕ್ಷ ಅಳೆದು ತೂಗಿ ಆಯ್ಕೆ ಮಾಡುತ್ತೆ. ನನಗಿಂತ ಅರಗ ಜ್ಞಾನೇಂದ್ರ, ಕೆ ಎಸ್ ಈಶ್ವರಪ್ಪ ಹಿರಿಯರಿದ್ದಾರೆ. ಜಿಲ್ಲೆಗೆ ಒಂದೇ ಸ್ಥಾನ ಕೊಟ್ಟರೆ ಕೆ ಎಸ್ ಈಶ್ವರಪ್ಪ ಅವರಿಗೆ ಕೊಡುತ್ತಾರೆ. ಎರಡು ಸ್ಥಾನ ಕೊಟ್ಟರೆ ನನಗೂ ಮಂತ್ರಿ ಸ್ಥಾನ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ರಾಜ್ಯ ರಾಜಕಾರಣದಲ್ಲಿ ಪ್ರಮುಖ. ಹೋರಾಟ, ಪ್ರಬುದ್ಧತೆಯಲ್ಲಿ ಜಿಲ್ಲೆ ಪ್ರಮುಖವಾಗಿದೆ. ಶಿವಮೊಗ್ಗ ಜಿಲ್ಲೆಗೆ 2 ಸ್ಥಾನ ನೀಡಿದರೆ ಅದರಲ್ಲಿ ನಾನು ಇರುತ್ತೇನೆ ಎಂದು ಸಚಿವ ಸ್ಥಾನ ಆಸೆ ವ್ಯಕ್ತಪಡಿಸಿದರು.









