ಟೋಕಿಯೋ ಒಲಂಪಿಕ್ಸ್ : ಫೈನಲ್ ಪ್ರವೇಶಿಸದ ತಾಜಿಂದರ್
ಟೋಕಿಯೋ : ಒಲಂಪಿಕ್ಸ್ ಥೋರ್ ಶಾಟ್ ಪುಟ್ ವಿಭಾಗದಲ್ಲಿ ಭಾರತದ ತಾಜಿಂದರ್ ಪಾಲ್ ಸಿಂಗ್ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇಂದು ನಡೆದ ಮೊದಲ ಗುಂಪಿನ ಅರ್ಹತಾ ಸುತ್ತಿನಲ್ಲಿ 16 ಮಂದಿ ಸ್ಪರ್ಧಿಸಿದ್ದರು. ಫೈನಲ್ ಪ್ರವೇಶಿಸಲು 21.20 ಮೀಟರ್ ದೂರ ಎಸೆಯಬೇಕಿತ್ತು.
ಆದ್ರೆ ಭಾರತದ ತಾಜಿಂದರ್ ಪಾಲ್ ಸಿಂಗ್ ತನ್ನ ಮೂರು ಅವಕಾಶಗಳಲ್ಲಿ ಒಮ್ಮೆಯೂ 20 ಮೀಟರ್ ಗಡಿದಾಟಲಿಲ್ಲ.
ಮೊದಲ ಅವಕಾಶದಲ್ಲಿ 19.99 ಮೀಟರ್ ಎಸೆದರು. ಉಳಿದ ಎರಡು ಅವಕಾಶಗಳಲ್ಲಿ ಪೋಲ್ ಮಾಡಿಕೊಂಡರು.
ಅಂದಹಾಗೆ ತಾಜಿಂದರ್ ಅವರ ವೈಯಕ್ತಿಕ ದಾಖಲೆ 21.49 ಇದ್ದು, ಇಷ್ಟು ದೂರ ಎಸೆದಿದ್ದರೆ ಫೈನಲ್ ಗೆ ಅರ್ಹತೆ ಪಡೆಯುತ್ತಿದ್ದರು.









