ಝೀರೋ ಟ್ರಾಫಿಕ್ ಬೇಡ : ಬೊಮ್ಮಾಯಿ ಮಹತ್ವದ ನಿರ್ಧಾರ
ಬೆಂಗಳೂರು : ಸಭೆ ಸಮಾರಂಭಗಳಲ್ಲಿ ಹಾರಾ, ತುರಾಯಿ ಹಾಕಬಾರದೆಂದು ಸೂಚನೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಬಾರದೆಂದು ಪೆÇಲೀಸರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ನಿರಾಕರಿಸಿರುವ ಬೊಮ್ಮಾಯಿ ಅವರು, ತಮ್ಮ ಸಂಚಾರದ ವೇಳೆ ಸಿಗ್ನಲ್ ಮಾತ್ರ ಫ್ರೀ ಮಾಡಿಕೊಡಲು ಸೂಚನೆ ನೀಡಿದ್ದಾರೆ.
ಅಲ್ಲದೇ ಮುಖ್ಯಮಂತ್ರಿಗಳ ಸಂಚಾರ ವೇಳೆಯೂ ಆಯಂಬುಲೆನ್ಸ್ ಗೆ ಮೊದಲು ಅನುವು ಮಾಡಿಕೊಡಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಚಾರಿ ಕಂಟ್ರೋಲ್‍ನಲ್ಲಿ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾವು ಮನೆಯಿಂದ ಹೊರಡುವಾಗ ಅಥವಾ ಅಧಿಕೃತ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಭದ್ರತೆಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಬಾರದು.
ನಾನು ಸಾಮಾನ್ಯ ಪ್ರಜೆಯಂತೆ ವಾಹನದಲ್ಲಿ ಸಂಚರಿಸುತ್ತೇನೆ. ಹೀಗಾಗಿ ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.









