ತಾಲಿಬಾನ್ ದುಷ್ಕøತ್ಯವನ್ನು ವಿಚಾರವಾದಿಗಳು ಖಂಡಿಸಲಿ : ಈಶ್ವರಪ್ಪ K S Eshwarappa saaksha tv
ಶಿವಮೊಗ್ಗ : ನಮ್ಮ ದೇಶದಲ್ಲಿ ಕೆಲವರು ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಶಾಂತಿಪ್ರೀಯತೆ, ಧರ್ಮ ಸಹಿಷ್ಣತೆ ನಮ್ಮ ದೇಶದಲ್ಲಿ ಚೆನ್ನಾಗಿದೆ. ತಾಲಿಬಾನ್ ದುಷ್ಕøತ್ಯವನ್ನು ವಿಚಾರವಾದಿಗಳು ಖಂಡನೆಯನ್ನಾದರೂ ಮಾಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಅತ್ಯಾಚಾರ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ನೋಡಿದಾಗ ಪ್ರಪಂಚದಲ್ಲಿ ಮಾನವೀಯತೆ ಇಲ್ಲವೇನೋ ಎನ್ನುವಂತಿದೆ. ಈ ರೀತಿಯ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ ಎಂದರು.
ಇನ್ನು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಕೆಟ್ಟದ್ದೇಯಾಗಿದೆ. ಮನುಷತ್ವವೂ ಇಲ್ಲದೆ ನಡೆಯುತ್ತಿರುವ ಚಟುವಟಿಕೆಗಳನ್ನು ಯಾವೊಬ್ಬ ನಾಗರಿಕನೂ ಬೆಂಬಲಿಸಲು ಸಾಧ್ಯವಿಲ್ಲ. ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿ ನಮ್ಮ ದೇಶದಲ್ಲಿ ನಾವು ಏನು ಒಳ್ಳೆಯದು ಮಾಡಬೇಕು ಎಂದು ತೀರ್ಮಾನಿಸಬೇಕು ಎಂದು ಹೇಳಿದರು.









