ಮೊಹಗೇನ್ ಲೇಕ್ : ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾಳೆ.
ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ಪರೀಕ್ಷೆ ಮುಂದೂಡವಾಯಿತು.
ಹಲವಾರು ವಾರಗಳ ಕಾಲ ಜ್ವರದಿಂದ ಬಳಲಿದ್ದ ಮಹಿಳೆ ಕ್ಯಾನ್ಸರ್ ವಿರುದ್ಧವೂ ಹೋರಾಡಿದ್ದಳು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಂಜಲೀನಾ ಅವರಿಗೆ ಏಪ್ರಿಲ್ 20 ರಂದು ನಡೆಸಿದ ಟೆಸ್ಟ್ ನಲ್ಲಿ ಕೊರೊನಾ ನೆಗೆಟಿವ್ ಕಂಡು ಬಂದಿದೆ. ನನ್ನ ತಾಯಿಯದ್ದು ಸೂಪರ್ ಹ್ಯೂಮನ್ ಡಿಎನ್ ಎ ಎಂದು ಏಂಜಲೀನಾ ಪುತ್ರಿ ಹೇಳಿದ್ದಾಳೆ.
ಏಂಜಲೀನಾ ಫ್ರೀಡ್ಮನ್ 1918 ರಲ್ಲಿ ಇಟಲಿಯಿಂದ ನ್ಯೂಯಾರ್ಕ್ ನಗರಕ್ಕೆ ವಲಸೆ ಬರುತ್ತಿದ್ದ ವೇಳೆ ಪ್ರಯಾಣಿಕರ ಹಡಗಿನಲ್ಲಿ ಜನಿಸಿದರು.