ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗದಲ್ಲಿ 110 ವರ್ಷದ ಅಜ್ಜಿಯೊಬ್ಬರು ಕಿಲ್ಲರ್ ಕೊರೊನಾ ವೈರಸ್ ಅನ್ನೇ ಮಣಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದ್ರೆ ವಿಪರ್ಯಾಸ ಏನಂದ್ರೆ ಈ ಶತಾಯುಷಿಯನ್ನು ಕರೆದೊಯ್ಯಲು ಸಂಬಂಧಿಕರು ಹಿಂದೇಟು ಹಾಕಿದ್ದಾರೆ.
ಜುಲೈ 27 ರಂದು ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಸಿದ್ದಮ್ಮ ಎಂಬ ಅಜ್ಜಿಗೆ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಕೂಡಲೇ ಅವರನ್ನು ಆರೋಗ್ಯಾಧಿಕಾರಿಗಳು ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದರು. ಇಂದು ಅಜ್ಜಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆದರೇ ಅಜ್ಜಿಯ ಮನೆಯವರು ಕ್ವಾರಂಟೈನ್ ನಲ್ಲಿದ್ದು, ಅಜ್ಜಿಯನ್ನು ಕರೆದೊಯ್ಯಲು ಸಂಬಂಧಿಕರು ಹಿಂದೇಟು ಹಾಕಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದಡೆ ಡಿಎಆರ್ ಪೋಲಿಸ್ ಅಧಿಕಾರಿಗಳು ಕೂಡ ಸೀಲ್ ಡೌನ್ ಆಗಿರುವ ಕ್ವಾಟ್ರಸ್ ಗೆ ಬರಬೇಡಿ ಎಂದು ಹೇಳುತ್ತಿದ್ದಾರೆ. ಕೊನೆಗೆ ಅಜ್ಜಿಯ ಮೊಮ್ಮಗ ತಮ್ಮ ಮನೆಗೆ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾರೆ.