ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಾಗ ಮಳೆ ಬೀಳುತ್ತಿರುವ ಪರಿಣಾಮ ಅದರಲ್ಲೂ ಶೀತ ಪ್ರದೇಶದಲ್ಲಿ ಕಾಳಿಂಗ ಸರ್ಪಗಳು ಪ್ರತ್ಯಕ್ಷವಾಗುತ್ತಿವೆ.

ಹೀಗೆ ಗೋಣಿಕೊಪ್ಪದ ಮುಕ್ಕಾಟೀರ ರವಿ ಎಂಬುವವರ ತೋಟದಲ್ಲಿ ಅಂದಾಜು 12 ಅಡಿ ಉದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಉರಗ ತಜ್ಞ ಬಿಟ್ಟಂಗಾಲದ ಸ್ನೇಕ್ ಗಗನ್ ತೋಟದ ಕುರುಚಲು ಕಾಡಿನ ನಡುವೆ ಆತಂಕ ಉಂಟು ಮಾಡುತ್ತಿದ್ದ ಕಾಳಿಂಗವನ್ನು ಹರಸಾಹಸ ಪಟ್ಟು ಸೆರೆ ಹಿಡಿದು ಕೇರಳ ಗಡಿಯಲ್ಲಿನ ಮಾಕುಟ್ಟ ದಟ್ಟಾರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಗಗನ್ ಇಲ್ಲಿವರೆಗೆ 55 ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದಿದ್ದು, 6 ಸಾವಿರಕ್ಕೂ ಹೆಚ್ಚು ಇತರೆ ಹಾವುಗಳ ರಕ್ಷಣೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








