ಮಾಜಿ ವಿಶ್ವ ಸುಂದರಿ ಸ್ಪರ್ಧಿಯಾಗಿದ್ದ ಶೆರಿಕಾ ಡಿ ಅರ್ಮಾಸ್ (26) ಸಾವನ್ನಪ್ಪಿದ್ದಾರೆ.
ಇವರು ಗರ್ಭ ಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕ್ಯಾನ್ಸರ್ ನಿಂದಾಗಿ ಶೆರಿಕಾ ಅವರು ಹಲವಾರು ಬಾರಿ ಚಿಕಿತ್ಸೆಗಳಿಗೆ ಒಳಗಾಗಿದ್ದರು. ಅವರು 2015ರಲ್ಲಿ ತಮ್ಮ ದೇಶ ಉರುಗ್ವೆ ಪ್ರತಿನಿಧಿಸಿದ್ದರು. ಈಗ ಶೆರಿಕಾ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಮಿಸ್ ಉರುಗ್ವೆ, ಕಾರ್ಲಾ ರೊಮೆರೊ ಅವರು ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಎಲ್ಲರೂ ಶೋಕ ವ್ಯಕ್ತಪಡಿಸಿದ್ದಾರೆ.