ಬೆಂಗಳೂರು ಗ್ರಾಮಾಂತರ: ಹಾವು ಕಚ್ಚಿ(Snake bite)ದ ಪರಿಣಾಮ 7 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಟಿ ಹೊಸಹಳ್ಳಿ ಗ್ರಾಮದ ಅನುಷಾ ( 7 ) ಸಾವನ್ನಪ್ಪಿದ ದುರ್ದೈವಿ ಮಗು. ಬಾಲಕಿಯ ತಂದೆ ಹಾಗೂ ತಾಯಿ ಕೋಳೂರು ಗ್ರಾಮದ ತೋಟದ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತು. ಎಂದಿನಂತೆ ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕಿ ಆಟವಾಡುತ್ತಿದ್ದಾಳೆ. ಈ ವೇಳೆ ಹಾವು ಕಚ್ಚಿದೆ.
ಮಗು ಅಸ್ವಸ್ಥಗೊಂಡಿದ್ದನ್ನ ಕಂಡ ಕುಟುಂಬಸ್ಥರು ಕೂಡಲೇ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.