ಹಾಸನ : ಗಾಳಿ, ಮಳೆಗೆ ಬಿದ್ದಿದ್ದ ತೆಂಗಿನಕಾಯಿ ಆರಿಸುತ್ತಿದ್ದ ಬಾಲಕನ ಮೇಲೆ ಮರದಿಂದ ಏಕಾಏಕಿ ತಂಗಿನಕಾಯಿ ಗೊಂಚಲು (Coconut Shell) ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚನ್ನರಾಯಪಟ್ಟಣದ (Channarayapatna) ಬಿ.ಚೋಳೇನಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಪ್ರಜ್ವಲ್ (16) ಸಾವನ್ನಪ್ಪಿದ ದುರ್ದೈವಿ. ಬಾಲಕ. ಗಾಳಿ, ಮಳೆಗೆ ಬಿದ್ದಿದ್ದ ಕಾಯಿಗಳನ್ನು ಒಂದೆಡೆ ಸಂಗ್ರಹಿಸುವಾಗ ಏಕಾಏಕಿ ವಿದ್ಯಾರ್ಥಿಯ ತಲೆಯ ಮೇಲೆ ಗೊಂಚಲು ಬಿದ್ದಿದೆ. ತೀವ್ರವಾಗಿ ಪೆಟ್ಟಾಗಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ.
ಶ್ರವಣಬೆಳಗೊಳ (Shravanabelagola) ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ಎಂಬುವವರ ಮಗ ಮಗ ಪ್ರಜ್ವಲ್ ನೊಂದಿಗೆ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟಕ್ಕೆ ಹೋಗಿ ಕಾಯಿ ಎತ್ತಿ ಹಾಕಿ ಸಣ್ಣಪುಟ್ಟ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಆದರೆ, ಭಾರೀ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ನೆಲಕ್ಕೆ ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ. ಪ್ರಜ್ವಲ್ ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು,. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.








