ಬಾಲಕನ ಶ್ವಾಸಕೋಶದಲ್ಲಿ ಗುಂಡು ಸೂಜಿ ಪತ್ತೆಯಾಗಿರುವ ಘಟನೆ ನಡೆದಿದೆ.
13 ವರ್ಷದ ಶಿವಕುಮಾರ್ ಎಂಬ ಬಾಲಕನ ಶ್ವಾಸಕೋಶದಲ್ಲಿಯೇ ಗುಂಡು ಸೂಜಿ ಪತ್ತೆಯಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬಾಲಕ ದಾಖಲಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ, ಹೊರಗೆ ತೆಗೆದಿದ್ದಾರೆ. ವಿದ್ಯಾರ್ಥಿಯು ಶಾಲೆಯಲ್ಲಿ ಆಟವಾಡುವಾಗ ಗುಂಡು ಸೂಜಿ ನುಂಗಿದ್ದ. ಆ ವೇಳೆ ಅದು ಬಾಲಕನ ಬಲ ಶ್ವಾಸಕೋಶದೊಳಗೆ ಸೇರಿದೆ.
ರಿಮ್ಸ್ ವೈದ್ಯರ ತಂಡ ಗುಂಡು ಸೂಜಿಯನ್ನು ಬ್ರಾಂಕೋಸ್ಕೋಪ್ ಚಿಕಿತ್ಸೆ ಮೂಲಕ ಹೊರಗೆ ತೆಗೆದಿದ್ದಾರೆ.