ಶ್ರೀನಗರ: ಕಂದಕಕ್ಕೆ ಕ್ಯಾಬ್ ಬಿದ್ದ ಪರಿಣಾಮ 7 ಜನ ಸಾವನ್ನಪ್ಪಿರುವ ದುರ್ಘಟನೆಯೊಂದು ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ (Jammu And Kashmir) ಬಾರಾಮುಲ್ಲಾ ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದೆ. ಪರಿಣಾಮ ಕ್ಯಾಬ್ ನಲ್ಲಿದ್ದ 7 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂ 7 ಜನ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಜಮ್ಮು ಪ್ರದೇಶದ ಕಿಶ್ತ್ವಾರ್‌ನ ಮರ್ವಾನ್ ಪ್ರದೇಶದಲ್ಲಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದ ಸ್ನೋ ಕಟರ್ ಯಂತ್ರ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಸಂತ್ರಸ್ತ ಕುಟುಂಬಸ್ಥಱಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.