ಬೆಂಗಳೂರು: ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ರೌಡಿಶೀಟರ್ ನೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ಅಮಾನತು ಮಾಡಲಾಗಿದೆ.
ಅಪರಾಧ ಕೇಂದ್ರ ವಿಭಾಗದ ರೌಡಿ ನಿಗ್ರಹದಳದ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಎಂಬಾತ ಅಮಾನತು ಆಗಿರುವ ಅಧಿಕಾರಿ. ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ, ವರದಿ ನೀಡುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಅಲ್ಲದೇ, ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವನ ಕುರಿತು ವರದಿ ಕೇಳಿದ್ದರು.
ಆದರೆ, ಪೊಲೀಸ್ ಅಧಿಕಾರಿ ರೌಡಿಶೀಟರ್ ರೋಹಿತ್ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ, ವರದಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವರದಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತರು ಸಿಸಿಬಿ ಅಧಿಕಾರಿ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.