ಚಿಕ್ಕೋಡಿ: ನಕಲಿ ವೈದ್ಯನೊಬ್ಬನ ನಿರ್ಲಕ್ಷ್ಯದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ನಡೆದಿದೆ.
ಶೇಜಲ್ ಅನಿಕೇತ ಮಾಳಿ(22) ಸಾವನ್ನಪ್ಪಿದ ದುರ್ದೈವ ಗರ್ಭಿಣಿ. ಆರ್ಎಂಪಿ ವೈದ್ಯ ಮಹಾವೀರ ಬಂಕಾಪುರೆ ಎಂಬಾತನೇ ಈ ನಕಲಿ ವೈದ್ಯ ಎನ್ನಲಾಗಿದೆ. ಹೆರಿಗಾಗಿ ಗರ್ಭಿಣಿ ಆಸ್ಪತ್ರೆಗೆ ಬಂದಿದ್ದರು. ಗರ್ಭಿಣಿ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಹೆರಿಗೆ ಅರ್ಧಕ್ಕೆ ಬಿಟ್ಟು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
ಆರ್ಎಂಪಿ ವೈದ್ಯ ಅರ್ಧಕ್ಕೆ ಹೆರಿಗೆ ಮಾಡಿಸುವುದನ್ನು ಬಿಟ್ಟಿದ್ದರಿಂದ ಗರ್ಭಿಣಿ ಶೇಜಲ್ ಬಂಕಾಪುರೆ ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರಿಂದ ಆರೋಪಿಸಿದ್ದಾರೆ. ಅಲ್ಲದೇ, ನಕಲಿ ವೈದ್ಯನ ಮನೆ ಮುಂದೆ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.