ದಾವಣಗೆರೆ: ಅಪಘಾತದಿಂದಾಗಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಬಿದ್ದಿದ್ದು, ವೈದ್ಯರು ಪ್ರಾಣ ಉಳಿಸಿರುವ ಘಟನೆ ನಡೆದಿದೆ.
ಅಪಘಾತದಿಂದಾಗಿ ರಸ್ತೆಯಲ್ಲಿ ಬಿದ್ದಿ ಬೈಕ್ ಸವಾರನಿಗೆ ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ ನೀಡಿ, ದೊಡ್ಡ ಅನಾಹುತದಿಂದ ವೈದ್ಯರು ಪಾರು ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಕ್ರಾಸ್ ಹತ್ತಿರ ನಡೆದಿದೆ.
ಬೈಕ್ ಸವಾರ ರಸ್ತೆಯಲ್ಲಿ ಬಿದ್ದು, ಪ್ರಜ್ಞೆ ತಪ್ಪಿದ್ದ. ಗಾಬರಿಯಾದ ಆತನಿಗೆ ಬಿಪಿ ಏರುಪೇರಾಗಿ ಉಸಿರಾಟದ ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ವೈದ್ಯ ಡಾ. ರವಿಕುಮಾರ್ ಅವರು ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಪ್ರಾಣ ಉಳಿಸಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸಿ, ಆತನ ಪ್ರಾಣ ಉಳಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ.