ಒಂದೇ ಯುವತಿಯನ್ನು ಇಬ್ಬರು ಪ್ರೀತಿಸುತ್ತಿದ್ದು, ಆ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ತ್ರಿಕೋನ ಪ್ರೇಮ ಪ್ರಕರಣದಿಂದಾಗಿಯೇ ಈ ಘಟನೆ ನಡೆದಿದ್ದು, ದೆಹಲಿಯ ಭಾಗೀರಥಿ ವಿಹಾರದಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ಇಬ್ಬರು ಯುವಕರು ಪ್ರೀತಿಸುತ್ತಿದ್ದರು. ಈ ಜಗಳವೇ ಕೊಲೆಗೆ ಕಾರಣವಾಗಿದ್ದು, ಮಾಹಿರ್ ಅಲಿಯಾಸ್ ಇಮ್ರಾನ್ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಆರೋಪಿ ಅರ್ಮಾನ್ ಖಾನ್ ಎನ್ನಲಾಗಿದೆ.
ಫ್ಲೆಕ್ಸ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, 21 ವರ್ಷದ ಯುವತಿಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ್ದ. ಆರೋಪಿಯು ಮಾಹಿರ್‌ಗೆ ಕನಿಷ್ಠ 50 ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.