ಮನೆ ನೀಡುವಂತೆ ವಿದ್ಯುತ್ ಕಂಬ ಏರಿ ಪ್ರತಿಭಟನೆ ಮಾಡಿದ ವ್ಯಕ್ತಿ Saaksha Tv
ತುಮಕೂರು: ಜಿಲ್ಲೆಯ ವ್ಯಕ್ತಿಯೊಬ್ಬ ಮನೆ ನೀಡುವಂತೆ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದ ಘಟನೆ ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ ಎಂಬ ವ್ಯಕ್ತಿ ನನಗೆ ಸರಕಾರದಿಂದ ಮನೆ ಮತ್ತು ರಸ್ತೆ ನಿರ್ಮಿಸಿಕೊಡಬೇಕು ಎಂದು ಬೆಳಿಗ್ಗೆ 10 ಗಂಟೆಗೆ ಹೈ ಟೆನ್ಷನ್ ವಿದ್ಯತ್ ಕಂಬ ಏರಿ ಕುಳಿತು ಸರಕಾರ ಮತ್ತು ತಹಸಿಲ್ದಾರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸೇರಿದ್ದಾರೆ ಆತನನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ ಆದರೆ ಆತ ಒಪ್ಪದೆ ಮೊಂಡುತನ ಮಾಡಿದ್ದಾನೆ.
ಸುಮಾರು 45 ನಿಮಿಷ ಹೈ ಟೆನ್ಷನ್ ಕಂಬದ ಅರ್ಧ ಭಾಗದಲ್ಲಿ ಕೂತು ನನಗೆ ಮನೆ ನೀಡಬೇಕು. ಗುಬ್ಬಿ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ. ಈ ವಿಷಯವನ್ನು ತಿಳಿದ ತಹಶೀಲ್ದಾರ್ ಆರತಿ, ಸಿಪಿಐ ನದಾಫ್ ಸ್ಥಳಕ್ಕೆ ಬಂದು ಶ್ರೀನಿವಾಸ್ ಅವರ ಮನವೊಲಿಸಿದರು. ಅಧಿಕಾರಿಗಳಿಂದ ಸಕಾರಾತ್ಮಕ ಭರವಸೆ ಸಿಕ್ಕಿದ ನಂತರ ಶ್ರೀನಿವಾಸ ಕೆಳಗೆ ಇಳಿದರು. ಶ್ರೀನಿವಾಸ ಹೈ ಟೆನ್ಷನ್ ಕಂಬ ಏರಿ ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.