Kalaburagi | ಪ್ರೀತ್ಸೆ ಅಂತ ಪ್ರಾಣ ಪೀಡಿಸಿದ್ದಕ್ಕೆ ಬಿತ್ತು ಯುವಕನ ಹೆಣ
ಕಲಬುರಗಿ : ಪ್ರೀತಿ ಮಾಡು ಎಂದು ಹಿಂದೆ ಬಿದ್ದಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ರೇವೂರು ಗ್ರಾಮದಲ್ಲಿ ನಡೆದಿದೆ.
ಹುಲ್ಲೂರು ಗ್ರಾಮದ ನಿವಾಸಿ ಚಂದ್ರಕಾಂತ್ ಕೊಲೆಯಾದ ದುರ್ದೈವಿಯಾಗಿದ್ದಾನೆ.

ಈತ ರೇವೂರು ಗ್ರಾಮದ ಯುವತಿಯನ್ನ ಪ್ರೀತಿಸುತ್ತಿದ್ದನಂತೆ.
ಇದಕ್ಕೆ ಆ ಯುವತಿ ಒಪ್ಪದಿದ್ದರೂ ಪದೇ ಪದೇ ಪ್ರೀತಿಸು ಅಂತಾ ಪೀಡಿಸುತ್ತಿದ್ದನಂತೆ.
ಇದರಿಂದ ರೊಚ್ಚಿಗೆದ್ದ ಯುವತಿ ಕಡೆಯವರು ಚಂದ್ರಕಾಂತ್ ಅವರನ್ನ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಇನ್ನ ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.