ತೇರಿಗೆ ಬಾಳೆಹಣ್ಣು ಬದಲು ಮೊಬೈಲ್ ಎಸೆದ ವ್ಯಕ್ತಿ
ರಾಯಚೂರು : ಸಾಮಾನ್ಯವಾಗಿ ತೇರಿಗೆ ಬಾಳೆಹಣ್ಣು ಎಸೆಯುವುದು ನಮ್ಮಲ್ಲಿರುವ ಪದ್ದತಿ.
ಆದ್ರೆ ರಾಯಚೂರು ಜಿಲ್ಲೆಯ ಪ್ರಸಿದ್ಧ ಶ್ರೀಬೂದಿ ಬಸವೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ವೇಳೆ ವ್ಯಕ್ತಿವೊಬ್ಬ ತೇರಿಗೆ ಮೊಬೈಲ್ ಎಸೆದಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪ್ರಸಿದ್ದ ಶ್ರೀಬೂದಿಬಸವೇಶ್ವರ ಸ್ವಾಮಿ ಮಠದ ಪರಂಪರೆಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನ ಮುಗಿಸಿ ಭಕ್ತರ ಝೇಂಕಾರದ ನಡುವೆ ರಥವನ್ನು ರಥಬೀದಿಯಲ್ಲಿ ಸಾಗಿಸಲಾಗುತ್ತಿತ್ತು.
ಜಾತ್ರೆಗೆ ಆಗಮಿಸಿದ ಭಕ್ತರು ಸಾಗುತ್ತಿರುವ ರಥಕ್ಕೆ ಉತ್ತುತ್ತೆ, ಬಾಳೆಹಣ್ಣು ಎಸೆಯುತ್ತಿದ್ದರು. ಇದರ ಮಧ್ಯೆ ಇದ್ದ ಭಕ್ತ ತನ್ನ ಮೊಬೈಲನ್ನು ರಥಕ್ಕೆ ಎಸೆದಿದ್ದಾನೆ.
ಜಾತ್ರಾ ಮಹೋತ್ಸವದ ವೇಳೆ ಭಕ್ತರೊಬ್ಬರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ವೇಳೆ ಭಕ್ತ ಮೊಬೈಲ್ ಎಸೆದಿರುವ ದೃಶ್ಯ ಸೆರೆಯಾಗಿದೆ.
