ಬೆಂಗಳೂರು: ವಾಕಿಂಗ್‍ಗೆಂದು ಪಾರ್ಕಿಗೆ ಬಂದಿದ್ದ ವ್ಯಕ್ತಿಯೊಬ್ಬ ದಿಢೀರ್ ಕುಸಿದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್.ಟಿ ನಗರದಲ್ಲಿ ನಡೆದಿದೆ.
ಆರ್.ಟಿ ನಗರದ ಪಾರ್ಕ್‍ಗೆ ವ್ಯಕ್ತಿಯೊಬ್ಬರು ಎಂದಿನಂತೆ ವಾಕಿಂಗ್‍ಗೆ ಆಗಮಿಸಿದ್ದರು. ವಾಕಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಮೃತ ದೇಹದ ಗಂಟಲು ಮಾದರಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮೃತ ವ್ಯಕ್ತಿಗೆ
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಾರ್ಕ್‍ಗೆ ವಾಕಿಂಗ್‍ಗೆ ಬರುತ್ತಿರುವವರಿಗೂ ಕೊರೊನಾ ಆತಂಕ ಶುರುವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವರು ಮೃತಪಟ್ಟ ನಂತರ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿರುವುದು ರಾಜಧಾನಿಯಲ್ಲಿ ಸಮುದಾಯ ಹಂತಕ್ಕೆ ಹರಡಿರುವುದರ ಸ್ಪಷ್ಟ ನಿರ್ದರ್ಶನವಾಗಿದೆ.
ಕಳೆದ ಜುಲೈ ಆರಂಭದಿಂದ ಸಕಾಲಕ್ಕೆ ಚಿಕತ್ಸೆ ಸಿಗದೆ, ಉಸಿರಾಟದ ತೊಂದರೆಯಿಂದ ಬಳುತ್ತಿದ್ದ ಹಲವು ಮಂದಿ ಮೃತಪಟ್ಟ ನಂತರ ಕೊರೊನಾ ಪಾಸಿಟಿವ್ ಬರುತ್ತಿರುವುದು ನಗರದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
Film – ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಪ್ರಚಾರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಹಾಲಿವುಡ್‌ನಲ್ಲಿ ಮಿಂಚಿದ ಕನ್ನಡಿಗ
ಮಂಗಳೂರಿನ ಕೆರಾಡಿಯಿಂದ ಬಂದ ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಜಾಗತಿಕ ಮಟ್ಟದ ಅತಿದೊಡ್ಡ ಸೂಪರ್ ಹೀರೋ ಫ್ರಾಂಚೈಸಿ ‘ಸ್ಪೈಡರ್ ಮ್ಯಾನ್’ ಪ್ರಪಂಚಕ್ಕೆ ಕಾಲಿಡುವ...








