ಹಾಸನ: ಯುವಕನೊಬ್ಬ ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತೆ ಗರ್ಭಣಿಯಾಗುವಂತೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಜೀವನ್ (21) ಆರೋಪಿ ಎನ್ನಲಾಗಿದೆ. ಈತ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಆನಂತರ ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ. ವಿದ್ಯಾರ್ಥಿನಿ ಐದು ತಿಂಗಳ ಗರ್ಭಿಣಿಯಾದ ಬಳಿಕ ವಿಚಾರ ಬೆಳಕಿಗೆ ಬಂದಿದೆ.
ಮೊದಲು ವಿದ್ಯಾರ್ಥಿನಿ ಸಮಾಜಕ್ಕೆ ಹೆದರಿ ಈ ವಿಷಯವನ್ನು ಯಾರಿಗೂ ಹೇಳಿಲ್ಲ. ಆ ನಂತರ ದೇಹದಲ್ಲಾಗುವ ಬದಲಾವಣೆ ಕಂಡು ಪೋಷಕರ ಬಳಿ ಈ ವಿಷಯ ಹೇಳಿದ್ದಾಳೆ. ನಂತರ ಬಾಲಕಿಯ ಪೋಷಕರು ಹಾಸನ (Hassan) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.