ಬೀಜಿಂಗ್: ಚೀನಾದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ಭಾರೀ ಸಾವು-ನೋವು ಸಂಭವಿಸಿರುವ ಘಟನೆ ನಡೆದಿದೆ.
111 ಜನ ಬಲಿಯಾಗಿ, 230ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಘಟನೆ ಚೀನಾದ ಗನ್ಸು-ಕಿಂಗ್ಹೈ (China’s Gansu) ಗಡಿ ಪ್ರದೇಶದಲ್ಲಿ ನಡೆದಿದೆ. 111 ಜನ ಸಾವನ್ನಪ್ಪಿದ್ದು, 230ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಭೂಕಂಪದ ತೀವ್ರತೆ 6.1 ದಾಖಲಾಗಿದೆ. ಚೀನಾದ ಸರ್ಕಾರಿ ಮಾಧ್ಯಮ ಭೂಕಂಪದ ತೀವ್ರತೆ 6.2 ಎಂದು ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಪಶ್ಚಿಮ-ನೈಋತ್ಯಕ್ಕೆ 102 ಕಿಮೀ ದೂರದಲ್ಲಿರುವ ಗನ್ಸು (Gansu) ಪ್ರಾಂತ್ಯದ ರಾಜಧಾನಿ ಲಾನ್‌ಝೌ ಬಳಿ 35 ಕಿಮೀ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಚೀನಾ ಹವಾಮಾನ ಪರಿಸ್ಥಿತಿಯೂ ಶೀತಮಯವಾಗುತ್ತಿದೆ. ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದ ಸಮೀಪದ ಲಿನ್ಕ್ಸಿಯಾ, ಗನ್ಸುನಲ್ಲಿ ತಾಪಮಾನ ಮೈನಸ್ 14 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎನ್ನಲಾಗಿದೆ.