ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೇಸ್ ಪ್ರತಿಭಟನೆ, ಸುವರ್ಣಸೌಧದ ಬಳಿ ಹೈಡ್ರಾಮ…
ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ಭ್ರಷ್ಟಾಚಾರದ ವಿರುದ್ಧ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ , ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ. ಕಾಂಗ್ರೇಸ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನಾ ರ್ಯಲಿ ಸುವರ್ಣ ಸೌಧವನ್ನ ತಲುಪಿದಾಗ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕಂಗ್ರೇಸ್ ನಾಯಕರು ಪ್ರತಿಭಟಿಸಿದರು, ಈಗಾಗಿ ಸುವರ್ಣ ಸೌಧದ ಬಲಿ ಕೆಲಕಾಲ ಉದ್ವಿಘ್ನ ವಾತಾವರಣ ಸೃಷ್ಟಿಯಾಯಿತು. ಟ್ರ್ಯಾಕ್ಟರ್ ಮೂಲಕ ಸುವರ್ಣ ಸೌಧ ಪ್ರವೇಶಕ್ಕೆ ಮುಂದಾದ ಕಾಂಗ್ರೆಸ್ ನಾಯಕರಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ನೀಡಿದರು. ಆದರೂ ಯಾವುದೇ ಕಾರಣಕ್ಕೂ ಪಟ್ಟು ಬಿಡದ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧ ಪ್ರವೇಶಿಸಿದ್ದಾರೆ.
ಬ್ಯಾರಿಕೇಡ್ ತಳ್ಳಲು ಮುಂದಾದ ಕಾಂಗ್ರೆಸ್ ನಾಯಕರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರಯ್ಯ ಕಾಗೇರಿಗೆ ಕರೆ ಮಾಡಿ ಸುರ್ವಣ ಸೌಧ ಪ್ರವೇಶಕ್ಕೆ ಅನುಮತಿ ಕೇಳಿದ್ದಾರೆ. ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧ ಪ್ರವೇಶಿಸಲು ಕಾಗೇರಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ನಾಯಕರು ಬರೋಬ್ಬರಿ ಒಂದೂವರೆ ಗಂಟೆಗಳ ಹೈಡ್ರಾಮಾದ ಬಳಿಕ ಸುವರ್ಣ ಸೌಧ ಪ್ರವೇಶಿಸಿದ್ದಾರೆ
ರಾಜ್ಯ ಸರ್ಕಾರದ ತಾರತಮ್ಯ ನೀತಿ ಜನವಿರೋಧಿ ನೀತಿ ನೆರೆ ಪರಿಹಾರ ಮತ್ತು ಸರ್ಕಾರಿ ವೈಫಲ್ಯಗಳನ್ನ ಖಂಡಿಸಿ ಕಾಂಗ್ರೇಸ್ ಟ್ರಾಕ್ಟರ್ ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ…