ದಟ್ಟ ಮಂಜಿನಿಂದಾಗಿ ಹೆದ್ದಾರಿ ಅಪಘಾತ – ಮೂವರು ಪೊಲೀಸರ ಸಾವು

1 min read

ದಟ್ಟ ಮಂಜಿನಿಂದಾಗಿ ಹೆದ್ದಾರಿ ಅಪಘಾತ – ಮೂವರು ಪೊಲೀಸರ ಸಾವು

ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ದಟ್ಟ ಮಂಜಿನಿಂದಾಗಿ ಬಿಹಾರದ ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.  ಈ ವೇಳೆ 3 ಪೊಲೀಸರು ಸಜೀವ ದಹನವಾಗಿದ್ದು, ಇಬ್ಬರು ಪೊಲೀಸರ ಸ್ಥಿತಿ ಚಿಂತಾಜನಕವಾಗಿದೆ.

ಪಾಟ್ನಾ ನಗರದ ಗಾರ್ಡ್ನಿಬಾಗ್ ಪೊಲೀಸರು ಗಸ್ತು ತಿರುಗುವಾಗ ಅತೀವೇಗವಾಗಿ ಬಂದ ಟ್ರಕ್, ಮಂಜಿನಿಂದಾಗಿ ಗಾಡಿ ಗುರುತಿಸಲಾಗದೆ  ಜಿಪ್ಸಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಪಲ್ಟಿಯಾದ ತಕ್ಷಣ ಪೊಲೀಸ್ ವಾಹನಕ್ಕೆ ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿದ್ದು, ಜಿಪ್ಸಿಯಲ್ಲಿ ಕುಳಿತಿದ್ದ 5 ಜನ ಪೊಲೀಸರು ಸುಟ್ಟು ಕರಕಲಾಗಿದ್ದಾರೆ. ಜನರು ಮತ್ತು ಪೊಲೀಸರು ಸಹಾಯಕ್ಕಾಗಿ ಬರುವಷ್ಟರಲ್ಲಿ 3 ಪೊಲೀಸರು ಸಾವನ್ನಪ್ಪಿದ್ದರು.

ಮೃತಪಟ್ಟ ಮೂವರೂ ಗೃಹರಕ್ಷಕ ದಳದ ಯೋಧರು. ಮೃತಪಟ್ಟ ಪೊಲೀಸರನ್ನು ಪ್ರಭು ಸಾಹ್, ಪುಖ್ರಾಜ್ ಕುಮಾರ್ (ಇಬ್ಬರೂ ಗೃಹರಕ್ಷಕ ದಳದ ಸಿಬ್ಬಂದಿ) ಮತ್ತು ರಾಜೇಶ್ ಕುಮಾರ್ (ಚಾಲಕ, ಜಿಲ್ಲಾ ಪೊಲೀಸ್ ಪಡೆ) ಎಂದು ಗುರುತಿಸಲಾಗಿದೆ. ಗಾಯಗೊಂಡ ಪೊಲೀಸರಲ್ಲಿ ಒಬ್ಬರು ಎಎಸ್ಐ ಸಿಯಾಚರಣ್ ಪಾಸ್ವಾನ್ ಮತ್ತು ಹೋಮ್ ಗಾರ್ಡ್ ಶ್ರೀಕಾಂತ್ ಸಿಂಗ್ ಎಂದು ಗುರುತಿಸಲಾಗಿದೆ.

 ‘ಹೆದ್ದಾರಿ ಟ್ರಕ್ ತುಂಬಾ ವೇಗವಾಗ ಹೋಗುತ್ತಿತ್ತು.  ದಟ್ಟವಾದ ಮಂಜಿನಿಂದಾಗಿ ಮುಂದೆ ನಿಂತಿದ್ದ ಪೊಲೀಸ್ ಜಿಪ್ಸಿಯನ್ನು ನೋಡಲಾಗಿಲ್ಲ ಆಗ ಸಡನ್ ಬ್ರೇಕ್ ಹಾಕಲು ಹೋಗಿ ನಿಯಂತ್ರಣ ತಪ್ಪಿ ಜಿಪ್ಸಿಮೇಲೆ ಉರುಳಿದೆ…

ಸ್ಫೋಟದ ಶಬ್ದವು ಎಷ್ಟು ಪ್ರಬಲವಾಗಿತ್ತೆಂದರೆ ಎಂದರೆ ಸುಮಾರು 500 ಮೀಟರ್‌ಗಳವರೆಗೆ ಶಬ್ದ ಕೇಳಿದೆ. ಪೊಲೀಸ್ ಜಿಪ್ಸಿಯ ಪೆಟ್ರೋಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಫೋಟ ಸಂಭವಿಸಿದೆ. ಪೊಲೀಸ್ ಜಿಪ್ಸಿಗೆ ಸಂಪೂರ್ಣ ಹಾನಿಯಾಗಿದೆ.

ಘಟನೆಯ ನಂತರ ಗಾರ್ಡನಿಬಾಗ್ ಮತ್ತು ಬೇರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd