ಬೆಂಗಳೂರು: ಅಪ್ರಾಪ್ತ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿ ನಂತರ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ತಾಯಿ ಹಾಗೂ ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಕೋಪರದ ಬರದಲ್ಲಿ ಮಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಪ್ರಾಪ್ತ ಬಾಲಕ 17 ವರ್ಷದವನಾಗಿದ್ದು, 40 ವರ್ಷದ ನೇತ್ರಾ ಅವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ತಾಯಿ ಸರಿಯಾಗಿ ನೋಡಿಕೊಂಡಿಲ್ಲ ಮತ್ತು ಸರಿಯಾಗಿ ಆಹಾರವನ್ನು ನೀಡುತ್ತಿರಲಿಲ್ಲ ಎಂದು ಬಾಲಕ ಪೊಲೀಸರಿಗೆ ಹೇಳಿದ್ದಾನೆ. ಕಾಲೇಜಿಗೆ ಹೋಗುವಾಗ, ಅವನ ತಾಯಿ ಅವನನ್ನು ಗದರಿಸಿದ್ದರಿಂದ ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೋಪದಲ್ಲಿ ತಲೆಗೆ ಲೋಹದ ರಾಡ್ ನಿಂದ ಹಲ್ಲೆ ನಡೆಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.