ಬೆಂಗಳೂರು: ಒಲಿಂಪಿಕ್ಸ್ ನ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ (Team India Hockey) ತಂಡದ ಆಟಗಾರನ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ.
ಡಿಫೆಂಡರ್ ಆಟಗಾರ ವರುಣ್ ಕುಮಾರ್ (Varun Kumar) ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕ್ರೀಡೆಯೊಂದರಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಯುವತಿಯ ಮೇಲೆ ವರುಣ್ ಕುಮಾರ್ ಅತ್ಯಾಚಾರ ನಡೆಸಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ಎಫ್ ಐಆರ್ ದಾಖಲಾಗಿದೆ.
ವರುಣ್ ಕುಮಾರ್ಗೆ ಇನ್ಸ್ಟಾ ಮೂಲಕ ಯುವತಿಯ ಪರಿಚಯವಾಗಿತ್ತು. ಯುವತಿ 17 ವರ್ಷದವಳಾಗಿದ್ದಾಗಲೇ ಪ್ರೀತಿ (Love)ಸುವಂತೆ ಹಿಂದೆ ಬಿದ್ದು, ಮದುವೆಯಾಗಿ ನಂಬಿಸಿ ದೇಹ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಐದು ವರ್ಷಗಳಿಂದ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು, ಈಗ ಮದುವೆಯಾಗದೇ ವಂಚಿಸಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ. ಸದ್ಯ ವರುಣ್ ತಲೆ ಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಿಮಾಚಲ ಪ್ರದೇಶದವನಾಗಿರುವ ಕುಮಾರ್ ಹಾಕಿ ಆಟದ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ವಾಸಿಸುತ್ತಿದ್ದಾರೆ. 2017ರಲ್ಲಿ ಭಾರತ ಹಾಕಿ ತಂಡ ಸೇರಿದ್ದ ವರುಣ್ 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ, 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯ. ಕಂಚು ಗೆದ್ದಿದ್ದಕ್ಕೆ ಹಿಮಾಚಲ ಪ್ರದೇಶ 1 ಕೋಟಿ ರೂ. ಬಹುಮಾನ ನೀಡಿತ್ತು. ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್ ಭಾಜನರಾಗಿದ್ದರು.