ಭೋಪಾಲ್: ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನದಿಂದ ತಂದ ಚೀತಾ ಹಳ್ಳಿಗೆ ನುಗ್ಗಿ ಹಸುಗಳನ್ನು ತಿಂದು ತೇಗಿ, ಮತ್ತೆ ಕಾಡಿಗೆ ಮರಳಿದೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರದ ಝಾರ್ ಬರೋಡಾ ಗ್ರಾಮಕ್ಕೆ ಪ್ರವೇಶಿಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಕುನೊ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 20 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಅದು ಪ್ರವೇಶಿಸಿತ್ತು. ಕಳೆದ ತಿಂಗಳು ಕೆಎನ್‌ಪಿಯ ಕಾಡಿನಲ್ಲಿ ಬಿಡಲಾದ ನಾಲ್ಕು ನಮೀಬಿಯಾದ ಚೀತಾಗಳಲ್ಲಿ ಒಂದಾದ ಒಬಾನ್, ಉದ್ಯಾನವನದ ಆಗ್ರಾ ವ್ಯಾಪ್ತಿಯಲ್ಲಿರುವ ಎರಡು ಪಕ್ಕದ ಹಳ್ಳಿಗಳಾದ ಗೋಲಿಪುರ ಮತ್ತು ಝಾರ್ ಬರೋಡಾದಲ್ಲಿ ಬೆಳಿಗ್ಗೆ ದಾರಿತಪ್ಪಿ ಸಂಜೆ 5ರ ಹೊತ್ತಿಗೆ ಕಾಡಿಗೆ ಮರಳಿದೆ. ಗ್ರಾಮಗಳಿಗೆ ನುಗ್ಗಿದ್ದ ಚೀತಾ ಎರಡು ಹಸುಗಳನ್ನು ಬೇಟೆಯಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಕುನೊ ರಾಷ್ಟ್ರೀಯ ಉದ್ಯಾನವನದಿಂದ ಬಂದ ಮಾಹಿತಿಯ ಪ್ರಕಾರ, ಗ್ರಾಮಗಳ ಬಳಿ ಚೀತಾಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಿಂದ ಚೀತಾ ಪರಾರಿಯಾಗಿರುವ ಸುದ್ದಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ವಿಜಯಪುರ ತಹಸಿಲ್‌ನ ಗೋಲು ಪುರ ಮತ್ತು ಜಾರ್ ಬರೋಡಾ ಗ್ರಾಮಗಳ ಬಳಿಯ ಹೊಲಗಳಲ್ಲಿ ಓಬನ್‌ನನ್ನು ಕಂಡಿದ್ದಾಗಿ ಕೆಲವರು ತಿಳಿಸಿದ್ದರು.
70 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ನೆಲದಲ್ಲಿ ಮತ್ತೆ ಚೀತಾಗಳ ಓಡಾಟ ಶುರುವಾಗಿದೆ. ಎರಡು ಬ್ಯಾಚ್‌ಗಳಲ್ಲಿ ಒಟ್ಟು 20 ಚಿರತೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಮೊದಲ ಬ್ಯಾಚ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂದ ನಮೀಬಿಯಾದಿಂದ ಎಂಟು ಚಿರತೆಗಳು ಹಾಗೂ 2023ರ ಫೆಬ್ರವರಿ 2023ಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ಕರೆ ತರಲಾಗಿದೆ.