ಐಪಿಎಲ್ ನ 42ನೇ ಪಂದ್ಯ ಪಂಜಾಬ್ ಹಾಗೂ ಕೆಕಾರ್ ಮಧ್ಯೆ ನಡೆಯಿತು. ಈ ಪಂದ್ಯದಲ್ಲಿ ದಾಖಲೆ ಮೇಲೆ ದಾಖಲೆಗಳು ಮೂಡಿ ಬಂದಿವೆ.
ಎರಡೂ ತಂಡಗಳು ಸಿಕ್ಸರ್ ಗಳ ಸುರಿಮಳೆಯನ್ನೇ ಮಾಡಿವೆ. ಹೀಗಾಗಿಯೇ ಈ ಪಂದ್ಯ ಸಿಕ್ಸರ್ ನಿಂದ ದಾಖಲೆ ಬರೆದಿದೆ. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ್ದ ಪಂಜಾಬ್ 18.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಚೇಸಿಂಗ್ ನಲ್ಲಿ ಇತಿಹಾಸ ಬರೆದಿದ್ದಲ್ಲದೆ, ಸಿಕ್ಸರ್ ನಲ್ಲಿ ಕೂಡ ಇತಿಹಾಸ ಬರೆದಿದೆ. ಈ ಪಂದ್ಯದಲ್ಲಿ ಪಂಜಾಬ್ ಆಟಗಾರರು ಬರೋಬ್ಬರಿ 24 ಸಿಕ್ಸರ್ ಸಿಡಿಸಿದ್ದಾರೆ. ಇನ್ನೊಂದೆಡೆ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ 18 ಸಿಕ್ಸರ್ ಸಿಡಿಸಿದೆ. ಹೀಗಾಗಿಯೇ ಈ ಪಂದ್ಯ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ.
ಒಟ್ಟಾರೆ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಒಟ್ಟು ಸಿಕ್ಸರ್ ಗಳ ಸಂಖ್ಯೆ 42. ಇದಕ್ಕೂ ಮೊದಲು ಈ ದಾಖಲೆ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಹೆಸರಿನಲ್ಲಿತ್ತು. ಇದೇ ವರ್ಷದ ಟೂರ್ನಿಯಲ್ಲಿ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 38 ಸಿಕ್ಸರ್ ಗಳು ಮೂಡಿ ಬಂದಿದ್ದವು. ಈಗ ಪಂಜಾಬ್ ಹಾಗೂ ಕೆಕೆಆರ್ ಪಂದ್ಯದಲ್ಲಿ 42 ಸಿಕ್ಸರ್ ಗಳು ಸಿಡಿದಿವೆ. ಇದು ಟಿ20ಯಲ್ಲಿಯೇ ಹೊಸ ದಾಖಲೆಯಾಗಿದೆ.